ನವದೆಹಲಿ: ಮಲೇಶಿಯಾ ಮೂಲದ ಉಗ್ರ ಸಂಘಟನೆಗಳ ಸಂಚನ್ನು ಭಾರತೀಯ ಗುಪ್ತಚರ ಸಂಸ್ಥೆ ವಿಫಲಗೊಳಿಸಿದೆ. ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿದ್ದ ಉಗ್ರರ ಜಾಗವನ್ನು ಪತ್ತೆ ಹಚ್ಚಿ ಬರಬಹುದಾದ ಅಪಾಯವನ್ನು ತಪ್ಪಿಸಿದ್ದಾರೆ.
ಉಗ್ರರು ಬಾಂಗ್ಲಾ ಅಥವಾ ನೇಪಾಳ ಗಡಿ ಮೂಲಕ ಭಾರತಕ್ಕೆ ನುಸುಳುವ ಸಂಚು ಮಾಡಿದ್ದ ವಿಷಯ ಬಯಲಾಗಿದ್ದು, ಅವರ ಲೆಕ್ಕಚಾರವೆಲ್ಲ ತಲೆಕೆಳಗಾಗಿದೆ. ಉಗ್ರ ಸಂಘಟನೆಯಲ್ಲಿ ಯುವತಿಯೊಬ್ಬಳು ಸೇರಿದ್ದಾಳೆ ಎನ್ನಲಾಗುತ್ತಿದ್ದು, ಚೆನ್ನೈನ ಹವಾಲಾ ದಲ್ಲಾಳಿ ಒಬ್ಬಳಿಗೆ ಹಣ ಪಾವತಿ ಮಾಡಿರುವ ವಿಷಯ ತನಿಖಾಧಿಕಾರಿಗಳಿಗೆ ತಿಳಿದುಬಂದಿದೆ.
ನವದೆಹಲಿ, ಶ್ರೀನಗರ, ಅಯೋದ್ಯ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ದಾಳಿ ನಡೆಸುವ ಸಂಚನ್ನು ಉಗ್ರರು ಹೋಗಿದ್ದು, ಎಲ್ಲ ರಾಜ್ಯಗಳಿಗೂ ಜಾಗೃತರಾಗಿ ರುವ ಆದೇಶವನ್ನು ಹೊರಡಿಸಲಾಗಿದೆ.