ನವದೆಹಲಿ: 19 ವರ್ಷಗಳ ಹಿಂದೆ ಅಂದರೆ 2001ರಲ್ಲಿ ಉಗ್ರ ಸಂಘಟನೆಗಳು ಸಂಸತ್ ಮೇಲೆ ನಡೆಸಿದ ದಾಳಿಯನ್ನು ಇಂದು ಮರೆಯಲು ಸಾಧ್ಯವಿಲ್ಲ ಎಂದ ಪ್ರಧಾನಿ ನರೇಂದ್ರ ಮೋದಿ.
ಟ್ವೀಟ್ ಮಾಡುವ ಮೂಲಕ ” 2001ರಲ್ಲಿ ಸಂಸತ್ತಿನ ಮೇಲೆ ನಡೆದ ಹೇಡಿತನದ ದಾಳಿಯನ್ನು ನಾವು ಎಂದಿಗೂ ಮರೆಯುವುದಿಲ್ಲ. ನಮ್ಮ ಸಂಸತ್ತನ್ನು ರಕ್ಷಿಸುವ ಸಲುವಾಗಿ ಪ್ರಾಣ ಕಳೆದುಕೊಂಡವರ ಶೌರ್ಯ ಮತ್ತು ತ್ಯಾಗವನ್ನು ನಾವು ನೆನೆಯುತ್ತಿದ್ದೇವೆ”, ಡಿಸೆಂಬರ್ 13, 2001ರಂದು ರಾಜಧಾನಿ ದೆಹಲಿಯಲ್ಲಿ ಸಂಸತ್ ಮೇಲೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಭೀಕರ ದಾಳಿಯನ್ನು ನಡೆಸಿಕೊಂಡಿದ್ದಾರೆ.
ಈ ದಾಳಿಯ ವೇಳೆ 8 ಮಂದಿ ಭದ್ರತಾ ಪಡೆ ಸಿಬ್ಬಂದಿಗಳು ಸೇರಿ 9 ಮಂದಿ ಸಾವನ್ನಪ್ಪಿದ್ದರು. ದಾಳಿ ನಡೆಸಿದ ಎಲ್ಲಾ 5 ಉಗ್ರರನ್ನು ಕೂಡ ಭದ್ರತಾಪಡೆಗಳು ಹತ್ಯೆಗೈದಿದ್ದರು. ಹಾಗೂ ಈ ಘಟನೆ ನಂತರದ ದಿನಗಳಲ್ಲಿ ಸಂಸತ್ತಿನ ಭದ್ರತೆಯನ್ನು ಹೆಚ್ಚಿಸಲು ಮುಖ್ಯ ಕಾರಣವಾಗಿ ನಿಂತಿದೆ.