ಉತ್ತರ ಪ್ರದೇಶ: ಉತ್ತರಪ್ರದೇಶದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ನಂತರ ಕಡ್ಡಾಯವಾಗಿ ಹತ್ತು ವರ್ಷಗಳ ಕಾಲ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಕಲಿಸಬೇಕು. ಈ ನಿಯಮಕ್ಕೆ ಬದ್ಧರಾಗದೇ ಇದ್ದಲ್ಲಿ ಅಂತಹವರು ಒಂದು ಕೊಟ್ಟಿ ಹಣವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು ಉತ್ತರಪ್ರದೇಶ ಸರ್ಕಾರ ಹೊಸದೊಂದು ಆದೇಶವನ್ನು ಹೊರಡಿಸಿದೆ.
2017ರ ಏಪ್ರಿಲ್ನಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ವೃತ್ತಿಗೆ ಸಂಬಂಧಪಟ್ಟಂತಹ ಒಂದು ಶರತ್ತುಬದ್ಧ ಆದೇಶವನ್ನು ಹೊರಡಿಸಿತ್ತು. ಆದರೆ ಅದು ಹೆಚ್ಚಿನ ಪರಿಣಾಮವನ್ನು ಬರದಿದ್ದ ಕಾರಣ ಈಗ ಈ ರೀತಿಯ ಹೊಸ ಆದೇಶವನ್ನು ಹೊರಡಿಸಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಸ್ನಾತಕೋತ್ತರ ಪದವಿ ಮುಗಿಸಿ ವೈದ್ಯರಾದ ನಂತರ ಸರಕಾರದಿಂದ ನಿರಾಕ್ಷೇಪಣಾ ಪತ್ರ ಪಡೆದು ಮುಂದಿನ ಅಧ್ಯಯನಕ್ಕಾಗಿ ತೆರಳುತ್ತಿದ್ದರು. ಆದರೆ ಅವರ ಕೆಲಸವನ್ನು ಮುಂದುವರಿಸುತ್ತಿರಲಿಲ್ಲ. ಈ ಕೃತ್ಯಗಳಿಗೆ ಕಡಿವಾಣ ಹಾಕಲು ಸರ್ಕಾರ ಇಂತಹ ಆದೇಶವನ್ನು ಹೊರಡಿಸಿದೆ.