ಉತ್ತರ ಪ್ರದೇಶ: ಉತ್ತರಪ್ರದೇಶದ ಬದೋಯಿಯಲ್ಲಿ ಕಿರಿಯ ಸೊಸೆಯೊಂದಿಗೆ 54 ವರ್ಷದ ವ್ಯಕ್ತಿ ಅಕ್ರಮ ಸಂಬಂಧ ಹೊಂದಿದ್ದಕ್ಕಾಗಿ ಪತಿಯನ್ನು ಕೊಂದ ಘಟನೆ ನಡೆದಿದೆ.
ಬದೋಯಿ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಎರಡನೇ ಮಗನ ಹೆಂಡತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದು, ಅದನ್ನು ವಿರೋಧಿಸಿ ಅವನ ಪತ್ನಿ ಹಾಗೂ ಹಿರಿಯ ಸೊಸೆ ಅನೇಕ ಬಾರಿ ಬುದ್ಧಿ ಹೇಳಿದರು ಲೆಕ್ಕಿಸದ ಆತ ಸಂಬಂಧವನ್ನು ಮುಂದುವರಿಸಲು ಪ್ರಯತ್ನಿಸಿದ. ಇದನ್ನು ಸಹಿಸಲಾಗದೆ ಆತನ ಪತ್ನಿ ಕತ್ತಿಯಿಂದ ಅವನ ಕುತ್ತಿಗೆಯನ್ನು ಇರಿದು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕೊಲೆಗೆ ಆಕೆಯ ದೊಡ್ಡ ಸೊಸೆ ಸಾತ್ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದರು. ಈ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ಬಂಧಿಸಿದ್ದು, ಕೊಯಿರಾಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಯಾದ ವ್ಯಕ್ತಿಗೆ ನಾಲ್ವರು ಮಕ್ಕಳಿದ್ದು, ಅದರಲ್ಲಿ ಇಬ್ಬರಿಗೆ ಮದುವೆಯಾಗಿತ್ತು ಹಾಗೂ ಅವರು ಮುಂಬೈನಲ್ಲಿ ಕೆಲಸಕ್ಕಾಗಿ ತಂಗಿದ್ದ ಕಾರಣ ಇಬ್ಬರು ಸೊಸೆಯಂದಿರು ಮಾವನ ಮನೆಯಲ್ಲಿ ಇದ್ದರು ಎನ್ನಲಾಗುತ್ತಿದೆ.