ನವದೆಹಲಿ: ಆರನೇ ವೇತನ ಆಯೋಗದ ಜಾರಿಗೆ ಆಗ್ರಹಿಸಿ ದೆಹಲಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯ ಸುಮಾರು 5000 ಮಂದಿ ನರ್ಸ್ ಗಳು ಪ್ರತಿಭಟನೆ ನಡೆಸುತ್ತಿರುವರು.
ಏಮ್ಸ್ ಈಗ ಗುತ್ತಿಗೆ ಆಧಾರದ ಮೇಲೆ ನರ್ಸ್ ಗಳನ್ನು ಸೇವೆಗೆ ನೇಮಕ ಮಾಡುತ್ತಿದೆ. ಇದನ್ನು ವಿರೋಧಿಸಿ ಈಗ ಪ್ರತಿಭಟನೆ ನಡೆಸಲಾಗಿದೆ. ಡಿ.16ರಂದು ನಡೆಯಬೇಕಾಗಿದ್ದ ಪ್ರತಿಭಟನೆಯನ್ನು ಇಂದೇ ನಡೆಸಿದ ಹಿನ್ನೆಲೆಯಲ್ಲಿ ರೋಗಿಗಳಿಗೆ ತುಂಬಾ ತೊಂದರೆ ಆಗಿದೆ.
ಆರನೇ ವೇತನ ಆಯೋಗವನ್ನು ಜಾರಿ ಮಾಡಬೇಕು ಎಂದು ನರ್ಸ್ ಸಂಘಟನೆಯು ಆಗ್ರಹಿಸುತ್ತಿದೆ. ಲಿಂಗಕ್ಕೆ ಅನುಗುಣವಾಗಿ ಆಯ್ಕೆ ಪದ್ಧತಿಯನ್ನು ರದ್ದು ಮಾಡಬೇಕು ಎನ್ನುವುದರ ಸಹಿತ ಹಲವಾರು ಬೇಡಿಕೆಗಳನ್ನು ಇಟ್ಟಿದೆ.