ಭೂಪಾಲ್: 14 ವರ್ಷದ ಮಗಳನ್ನು 4 ಲಕ್ಷಕ್ಕೆ ಮಾರಾಟ ಮಾಡಿದ ಘಟನೆ ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆದಿದೆ.
ಹಣಕ್ಕಾಗಿ ರಾಜಸ್ಥಾನದ ವ್ಯಕ್ತಿಯೊಬ್ಬನಿಗೆ ತನ ಸ್ವಂತ ಮಗಳನ್ನೇ ಮಾರಾಟ ಮಾಡಿ ಬಾಲಕಿಯನ್ನು ಆತನ ಕೈಗೊಪ್ಪಿಸಿ ತೆರಳಿದ್ದಾನೆ. ಆನಂತರ ಆ ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿದೆ.
ಬಾಲಕಿಯ ಮಾರಾಟದ ಕುರಿತು ಆಕೆಯ ಅತ್ತೆ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಈಗ ಆ ಬಾಲಕಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.