ನವದೆಹಲಿ: ನೌಕಾಪಡೆಯ ಹಿರಿಯ ಅಧಿಕಾರಿ, ವೈಸ್ ಅಡ್ಮಿರಲ್ ಶ್ರೀಕಾಂತ್ ಇಂದು ಕೊರೋನಾಗೆ ಬಲಿಯಾಗಿದ್ದಾರೆ.
ದೇಶದ ಅಣ್ವಸ್ತ್ರ ಸುರಕ್ಷೆ ಮತ್ತು ಕಮಾಂಡೋ ಪಡೆಯ ಮುಖ್ಯಸ್ಥರಾಗಿ ಕಾರ್ಯ ಸಲ್ಲಿಸುತ್ತಿದ್ದ ಇವರು ಸಿ ಬರ್ಡ್ ನೌಕ ನೆಲೆ ಯೋಜನೆಯ ಮಹಾನಿರ್ದೇಶಕರಾಗಿ ತಮ್ಮ ಚಾಕಚಕ್ಯತೆಯನ್ನು ತೋರಿದ್ದರು. ಇಷ್ಟಲ್ಲದೆ ಸಬ್ ಮೇರಿನ್ ಯುದ್ಧ ತಂತ್ರಗಾರಿಕೆಗೆ ಅವರು ಹೆಸರುವಾಸಿಯಾಗಿದ್ದರು. ಅದರೊಂದಿಗೆ ಕಾರವಾರದ ಸಿ ಬರ್ಡ್ ನೌಕಾನೆಲೆಯನ್ನು ಅಭಿವೃದ್ಧಿಗೊಳಿಸುವಲ್ಲೂ ತಮ್ಮದೇ ಆದ ಮಹತ್ವದ ಕಾರ್ಯಗಳನ್ನು ನಿರ್ವಹಿಸಿದ್ದಾರೆ.
ವೈಸ್ ಅಡ್ಮಿರಲ್ ಶ್ರೀಕಾಂತ್ ಅವರು ನವದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದ ಕಾರಣ ನಿಧನರಾದರು ಎಂದು ವರದಿಗಳು ತಿಳಿಸುತ್ತವೆ.
ವೈಸ್ ಅಡ್ಮಿರಲ್ ಶ್ರೀಕಾಂತ್ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಇನ್ನಿತರರು ಟ್ವೀಟ್ ಮೂಲಕ ಶೋಕ ವ್ಯಕ್ತಪಡಿಸಿದ್ದಾರೆ.