ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯ ಮೂಲಕ ಸುಮಾರು 1.4 ಲಕ್ಷ ಹುದ್ದೆಗಳಿಗೆ ಆಹ್ವಾನ ನೀಡಲಾಗಿದೆ. ಈ ನೇಮಕಾತಿಗಳ ಆಯ್ಕೆ ಮೂರು ಹಂತದಲ್ಲಿ ಆರಂಭವಾಗಲಿದ್ದು, ಅದರ ಕುರಿತಾದ ವಿವರಗಳನ್ನು ಇಲಾಖೆ ತೆರವುಗೊಳಿಸಿದೆ.
ಡಿಸೆಂಬರ್ 15ರಿಂದ 18ರವರೆಗೆ ಪರೀಕ್ಷೆಯ ಮೊದಲ ಹಂತ ನಡೆಯಲಿದ್ದು, ಎರಡನೇ ಹಂತ ಡಿಸೆಂಬರ್ 28ರಿಂದ 2021 ಮಾರ್ಚ್ ತನಕ ಜರುಗಲಿದೆ ಎಂದು ಹೇಳಲಾಗಿದೆ. ಮೂರನೇ ಹಂತದ ಪರೀಕ್ಷೆ 2021ರ ಏಪ್ರಿಲ್ ನಿಂದ ಪ್ರಾರಂಭವಾಗಿ ಜೂನ್ ನಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಇಲಾಖೆ ಪ್ರಕಟಿಸಿದೆ.
ದೇಶದಲ್ಲಿದೆ ಕೊರೋನಾ ಸಾಂಕ್ರಾಮಿಕ ರೋಗವೂ ಹರಡುತ್ತಿರುವ ಈ ಸಮಯದಲ್ಲಿ ನೇಮಕಾತಿಯ ಬಗ್ಗೆ ಪ್ರಕಟಿಸಿದ್ದು, ಕೋವಿಡ್ 19 ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ನೇಮಕಾತಿಯ ಸಮಯದಲ್ಲಿ ಪಾಲಿಸಲಾಗುವುದು ಎಂಬ ಸೂಚನೆಯನ್ನು ನೀಡಿದೆ.