ನವದೆಹಲಿ: ಮಿಲಿಟರಿ ಇತಿಹಾಸದಲ್ಲೇ ಅತ್ಯಂತ ಚಿಕ್ಕ ಹಾಗೂ ವೇಗವಾಗಿ ನಡೆದ ಯುದ್ಧ ಅಂದ್ರೆ ಅದು 1971ರ ಭಾರತ-ಪಾಕಿಸ್ತಾನ ಯುದ್ಧ. ಈ ಯುದ್ಧದ ಮೂಲ ಉದ್ದೇಶ ಪಾಕಿಸ್ತಾನದಿಂದ ಬಂಗ್ಲಾದೇಶವನ್ನ ವಿಮುಕ್ತಿಗೊಳಿಸುವುದಾಗಿತ್ತು. ಅದರಂತೆ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿತು. ಹೀಗಾಗಿ ಬಂಗ್ಲಾದೇಶ ವಿಮೋಚನಾ ದಿನ ಎಂದು ಪ್ರತಿವರ್ಷ ಡಿಸೆಂಬರ್ 16ನ್ನು ವಿಜಯ ದಿವಸ್ ಆಗಿ, ಬಾಂಗ್ಲಾದೇಶದ ಸ್ವಾತಂತ್ರ್ಯ ದಿವಸವಾಗಿ ಆಚರಿಸಲಾಗುತ್ತದೆ.
49 ವರ್ಷಗಳ ಹಿಂದೆ ಭಾರತೀಯ ಸೇನಾಪಡೆ ಪಾಕಿಸ್ತಾನವನ್ನ ಮಣಿಸಿ ಯುದ್ಧವನ್ನು ಜಯಿಸಿದ ಪರಿಣಾಮ ಬಾಂಗ್ಲಾದೇಶ ಒಂದು ಹೊಸ ರಾಷ್ಟ್ರವಾಗಿ ಉಗಮವಾಯ್ತು ಎಂದರೆ ತಪ್ಪಾಗಲಾರದು. ಪಾಕಿಸ್ತಾನದ 93 ಸಾವಿರ ಸೈನಿಕರನ್ನು ಭಾರತೀಯ ಸೈನಿಕರು ಶರಣಾಗುವಂತೆ ಮಾಡಿತ್ತು. ಇದು ಭಾರತೀಯ ಸೇನೆಯಹಿರಿಮೆಗೆ ಹಿಡಿದ ಒಂದು ಚಿಕ್ಕ ಕೈಗನ್ನಡಿಯಾಗಿದೆ. ಹಾಗೂ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸಿಕ್ಕ ಅತಿ ದೊಡ್ಡ ವಿಜಯಗಳಲ್ಲಿ ಇದು ಒಂದು.
ಭಾರತೀಯ ಸೇನೆಯ ಹೆಮ್ಮೆ ಹೆಚ್ಚಿಸಿದಂತಹ ಈ ವಿಜಯಕ್ಕೆ ಇಂದಿಗೆ 50 ವರ್ಷವಾಯಿತು. ಈ ನಿಟ್ಟಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿರಾಷ್ಟ್ರೀಯ ವಾರ್ ಮೆಮೋರಿಯಲ್ನಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ರು. ಇದೇ ವೇಳೆ ಅವರು ಸ್ವರ್ಣಿಂ ವಿಜಯ್ ಮಾಶಾಲ್(ವಿಜಯ ಜ್ಯೋತಿ) ಬೆಳಗಿಸಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್, ಸಶಸ್ತ್ರಪಡೆ, ನೌಕಾಪಡೆ ಹಾಗೂ ವಾಯುಪಡೆಯ ಮುಖ್ಯಸ್ಥರು ಹುತಾತ್ಮ ಯೋಧರಿಗೆ ಗೌರವನಮನ ಸಲ್ಲಿಸಿದರು.