ವಾಷಿಂಗ್ಟನ್: ಅಮೆರಿಕ ಅಧ್ಯಕ್ಷತೆಯ ನೂತನ ಆಯ್ಕೆಯ ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಗಳನ್ನು ಮಾಡಿದ್ದು, ಗೊಂದಲ ಹಾಗೂ ಊಹಾಪೋಹಗಳಿಗೆ ಕಾರಣವಾಗಿತ್ತು. ಅಂತೆಯೇ ಈಗ ಅವರ ಇನ್ನೊಂದು ಮಾತು ಕೇಳಿಬರುತ್ತಿದೆ.
ಚುನಾವಣೆಯ ಸಮಯದಲ್ಲಿ ಅಕ್ರಮ ಚಟುವಟಿಕೆಗಳು ನಡೆದಿದೆ ಎಂಬ ಅವರ ಆರೋಪಕ್ಕೆ ಈಗ ಇನ್ನೊಂದು ಸಬೂಬನ್ನು ನೀಡಿದ್ದಾರೆ. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಶೇಕಡ 92 ರಿಪಬ್ಲಿಕ್ ಮತದಾರರು ಅಭಿಪ್ರಾಯ ಪಡುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಆರೋಪವನ್ನು ವ್ಯಕ್ತಪಡಿಸಿದ್ದಾರೆ.
ಜನವರಿ 20ರಂದು ಅಮೆರಿಕದ ನೂತನ ಅಧ್ಯಕ್ಷರಾಗಿ ಜೊ ಬೈಬಲ್ ಹಾಗೂ ಉಪಾಧ್ಯಕ್ಷರಾಗಿ ಕಮಲ ಹ್ಯಾರಿಸ್ ಅಧಿಕಾರವಹಿಸಿಕೊಳ್ಳಲಿದ್ದು, ಡೊನಾಲ್ಡ್ ಟ್ರಂಪ್ ತಮ್ಮ ಅಧಿಕಾರವನ್ನು ಬಿಟ್ಟುಕೊಡಲು ಸಿದ್ದರಿಲ್ಲದ ಇರುವುದು ಅವರ ಮಾತು ಹಾಗೂ ಆರೋಪಗಳಿಂದ ಸ್ಪಷ್ಟವಾಗುತ್ತಿದೆ.