ನವದೆಹಲಿ: ಜೆಇಇ ಪರೀಕ್ಷೆಯ ದಿನಾಂಕ ಹಾಗೂ ಪೂರ್ಣ ವೇಳಾಪಟ್ಟಿಯನ್ನು ಇಂದು ಸಂಜೆ 6ಗಂಟೆಗೆ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ಪ್ರಕಟಿಸಿದ್ದಾರೆ.
ವೇಳಾಪಟ್ಟಿ ಪ್ರಕಟಿಸಿ ಮಾತನಾಡಿದ ಸಚಿವ ರಮೇಶ್, 2021ರ ಜೆಇಇ ಮೇನ್ಸ್ ಪರೀಕ್ಷೆ ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ನಾಲ್ಕು ಬಾರಿ ನಡೆಯಲಿದೆ. ಜೆಇಇ ಮೇನ್ಸ್ ನ ಮೊದಲ ಆವರ್ತವು ಫೆಬ್ರವರಿ 23 ರಿಂದ 26 ರವರೆಗೆ ನಡೆಯಲಿದೆ. ಅಷ್ಟೇ ಅಲ್ಲದೆ ಜೆಇಇ ಮೇನ್ಸ್ ಮುಂದಿನ ವರ್ಷದಿಂದ 13 ಭಾಷೆಗಳಲ್ಲಿ ನಡೆಯಲಿದೆ. ಅವುಗಳಲ್ಲಿ ಇಂಗ್ಲಿಷ್, ಹಿಂದಿ, ಬಂಗಾಳಿ, ಗುಜರಾತಿ, ಅಸ್ಸಾಮಿ, ಕನ್ನಡ, ಮರಾಠಿ, ಪಂಜಾಬಿ, ತಮಿಳು, ತೆಲುಗು, ಉರ್ದು, ಒಡಿಯಾ ಮತ್ತು ಮಲಯಾಳಂ ಸೇರಿವೆ ಎಂದು ಮಾಹಿತಿ ನೀಡಿದರು.
ಈ ಬಾರಿ ಹೊಸ ರೀತಿಯಲ್ಲಿ ಪರೀಕ್ಷೆಯ ಮಾದರಿ ಇರುತ್ತದೆ. ಅದರಲ್ಲಿ 15 ಪರ್ಯಾಯ ಪ್ರಶ್ನೆಗಳು ಇರಲಿದ್ದು ಅದಕ್ಕೆ ಯಾವುದೇ ನಕಾರಾತ್ಮಕ ಅಂಕ ಇರೋದಿಲ್ಲ. ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಿತದ ಪ್ರತಿ ವಿಭಾಗದಲ್ಲಿ ಅಭ್ಯರ್ಥಿಗಳು 90 ಪ್ರಶ್ನೆಗಳಲ್ಲಿ 75 ಅಥವಾ 30 ಪ್ರಶ್ನೆಗಳಲ್ಲಿ 25 ಪ್ರಶ್ನೆಗಳನ್ನು ಪ್ರಯತ್ನಿಸಬೇಕು ಎಂದು ಸಚಿವರು ಹೇಳಿದರು.