ನವದೆಹಲಿ: ದೇಶದಲ್ಲೆಡೆ ಸುದ್ದಿಮಾಡಿದ್ದ ಪ್ರಕರಣದಲ್ಲಿ ಒಂದು ಭಾಗವಾಗಿದ್ದ ಸ್ಯಾಂಡಲ್ವುಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಪೂರ್ವ ಜಾಮೀನು ಕೋರಿ ಆದಿತ್ಯ ಆಳ್ವ ಅವರು ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿದ್ದರು. ಆದರೆ ಅದನ್ನು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ.
ತನಿಖೆಯ ವೇಳೆ ಆದಿತ್ಯ ಅಲ್ವಾ ಅವರ ಹೆಸರು ಕೇಳಿಬಂದಾಗ ಅವರನ್ನು ಹುಡುಕಿಕೊಂಡು ಸಿಸಿಬಿ ಅಧಿಕಾರಿಗಳು ಮುಂಬೈನಲ್ಲಿರುವ ವಿವೇಕ್ ಒಬಿರಾಯ್ ನಿವಾಸಕ್ಕೆ ತೆರಳಿದ್ದರು. ಆದರೆ ಆದಿತ್ಯ ಅಲ್ಲಿಂದ ತಪ್ಪಿಸಿಕೊಂಡು ನಂತರ ಬಂಧನ ಪೂರ್ವ ಜಮೀನಿಗೆ ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ಇದೀಗ ನ್ಯಾಯಮೂರ್ತಿಗಳಾದ ಆರ್ ಎಸ್ ನಾರಿಮನ್ ಮತ್ತು ನವೀನ್ ಸಿನ್ಹಾ ಅವರ ನ್ಯಾಯಪೀಠ ಈ ಜಮೀನನ್ನು ತಳ್ಳಿಹಾಕಿ, “ಇಂತಹ ಪ್ರಕರಣದಲ್ಲಿ ಸಮಯ ವ್ಯರ್ಥ ಮಾಡಲು ಸುಪ್ರೀಂಕೋರ್ಟ್ ಬಯಸುವುದಿಲ್ಲ. ಹೈಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ” ಹೇಳಿದೆ.