ಶ್ರೀಹರಿಕೋಟ: ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು ಅಂತರ್ಜಾಲ ಸಂಪರ್ಕ ಸೇವೆ ಹಾಗೂ ವಿಪತ್ತು ನಿರ್ವಹಣೆಯಲ್ಲಿ ಬಳಸಲಾಗುವ ಸಿಎಂಎಸ್ 01 ಉಪಗ್ರಹವನ್ನು ಹೊತ್ತ ಪಿ ಎಸ್ ಎಲ್ ವಿ-ಸಿ 50 ರಾಕೆಟನ್ನು ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಉಡಾವಣೆ ಮಾಡುವಲ್ಲಿ ಯಶಸ್ವಿಯಾಯಿತು.
ಇಂದಿನ ಉಡಾವಣೆ ಪಿ ಎಸ್ ಎಲ್ ವಿ ಸರಣಿಗಳಲ್ಲಿ ಐದನೇ ಯೋಜನೆಯಾಗಿದ್ದು, ಸಿಎಂಎಸ್ 01 ಭಾರತದ 43ನೇ ಸಂಮೋಹನ ಉಪಗ್ರಹವೆಂದು ಗುರುತಿಸಲಾಗಿದೆ.