ನವದೆಹಲಿ: ಹೊಸ ಕೃಷಿ ಕಾನೂನಿನ ವಿರುದ್ಧ ಹೋರಾಡುತ್ತಿರುವ ರೈತರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಇಂದು ಮಾತನಾಡಿದರು. ರೈತರು ಬೇರೆಯವರ ಮಾತಿಗೆ ಮರುಳಾಗಿ ಇಂತಹ ಕೃತ್ಯಗಳನ್ನು ಎಸಗುವುದು ತಪ್ಪಾಗುತ್ತದೆ. ರೈತರಿಗಾಗಿ ಈವರೆಗೆ ನಮ್ಮ ಸರ್ಕಾರ ಅದಷ್ಟು ಕೆಲಸಗಳನ್ನು ಮಾಡಿದೆ ಹಾಗೆಯೇ ಇದು ಅವರ ಒಳಿತಿಗಾಗಿಯೇ ಎಂದು ಸಮರ್ಥಿಸಿಕೊಂಡರು.
ಇಂದು ನವದೆಹಲಿಯಲ್ಲಿ ಮಾತನಾಡಿದ ಅವರು ಈ ಹಿಂದೆ ವಿರೋಧಪಕ್ಷಗಳು ಅದೆಷ್ಟೋ ಕೃಷಿಕರವಿರೋಧಿ ಕೆಲಸಗಳನ್ನು ಮಾಡಿದೆ. ಹುಸಿ ಭರವಸೆಗಳನ್ನು ನೀಡುವೆ. ಅದಕ್ಕೆ ಚಿಕ್ಕ ಉದಾಹರಣೆ, ರಾತ್ರೋರಾತ್ರಿ ರೈತರು ಯೂರಿಯಾ ಕ್ಕಾಗಿ ಕ್ಯೂನಲ್ಲಿ ನಿಲ್ಲುತ್ತಿದ್ದರು. ಯೂರಿಯಾ ಕ್ಕಾಗಿ ರೈತರ ಮೇಲೆ ಲಾಠಿಚಾರ್ಜ್ ಮಾಡಿದ್ದರು. ಇಂದು ಯೂರಿಯಾ ಕೊರತೆ ಬಗ್ಗೆ ಯಾವುದೇ ವರದಿಗಳಿಲ್ಲ. ರೈತರ ಸಂಕಷ್ಟಗಳನ್ನು ನಿವಾರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ.ಸರ್ಕಾರ ಜಾರಿಗೆ ತಂದ ಪಿಎಂ-ಕಿಸಾನ್ ಯೋಜನೆ ರೈತರಿಗೆ ಪ್ರತಿ ವರ್ಷ ಸುಮಾರು 75 ಸಾವಿರ ಕೋಟಿ ರೂ ತಲುಪುತ್ತಿದೆ. ಅಂದರೆ 10 ವರ್ಷಗಳಲ್ಲಿ ಸುಮಾರು 7 ಲಕ್ಷ ಕೋಟಿ ರೂ ತಲುಪಿದೆ. ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಯಾವುದೇ ಯಾವುದೇ ಕಮೀಷನ್ ಗಳಿಲ್ಲ ಹಣ ವರ್ಗಾವಣೆಯಾಗುತ್ತಿದೆ ಎಂದು ಹೇಳಿದರು.
3 ಹೊಸ ಕೃಷಿ ಕಾನೂನಿನ ಬಗ್ಗೆ ಮಾತನಾಡಿದ ಅವರು ಈ ಕಾನೂನು ರಾತ್ರೋರಾತ್ರಿ ಜಾರಿಗೆ ಬಂದಿಲ್ಲ. ರಾತ್ರೋರಾತ್ರಿ ಕಾನೂನುಗಳು ಜಾರಿಯಾಗಿಲ್ಲ. ಹಲವು ದಶಕಗಳಿಂದ ಚರ್ಚೆ, ಸಮಾಲೋಚನೆ ಗಳು ನಡೆದಿವೆ ಎಂದರು. ಈಗ ನಮ್ಮ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಈ ನೀರಾವರಿ ಯೋಜನೆಗಳನ್ನು ಮಿಷನ್ ಮಾದರಿಯಲ್ಲಿ ಪೂರ್ಣಗೊಳಿಸುವ ಲ್ಲಿ ನಿರತವಾಗಿದೆ. ಪ್ರತಿ ಹೊಲಕ್ಕೂ ನೀರು ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಇಷ್ಟೇ ಅಲ್ಲದೆ ಇನ್ನೂ ಹಲವು ರೈತರ ಕೆಲಸಗಳು ನಡೆಯುತ್ತಲೇ ಇವೆ. ಹೀಗಿರುವಾಗ ರೈತರಿಗೆ ಕೇಳು ಮಾಡುವ ಕೆಲಸವನ್ನು ನಾವು ಎಂದಿಗೂ ಮಾಡುವುದಿಲ್ಲ ಎಂದು ಪ್ರಧಾನಿ ತಿಳಿಸಿದರು.
ಡಿಸೆಂಬರ್ 18ರಂದು ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರದೇಶದ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದು ಸುಮಾರು 23 ಸಾವಿರ ಹಳ್ಳಿಗಳಿಗೆ ವಿಡಿಯೋ ಪ್ರಸಾರ ವಾಗುತ್ತಿದೆ.