ಯುಎಸ್ ನಲ್ಲಿ ಒಮ್ಮೆಲೆ 2200 ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿರುವ ಅಟ್ಲಾಂಟಾ ಮೂಲದ ಕೋಕೋ ಕೋಲಾ ಕಂಪನಿ.
ಪ್ರಪಂಚದ ಹಲವೆಡೆ ತಂಪು ಪಾನೀಯವಾಗಿ ಕುಡಿಯಲು ಬಳಕೆಯಾಗುತ್ತಿರುವ ಕೋಕೋ ಕೋಲಾ ಕಂಪನಿ ತನ್ನ ಕಾರ್ಮಿಕರನ್ನು ಒಮ್ಮೆಲೆ ಬಹುದೊಡ್ಡ ಪ್ರಮಾಣದಲ್ಲಿ ಕೆಲಸದಿಂದ ತೆಗೆದು ಹಾಕಿದ್ದು, ವ್ಯಾಪಾರ ಘಟಕಗಳು ಮತ್ತು ಬ್ರಾಂಡ್ ಗಳನ್ನು ಬೇರ್ಪಡಿಸುವ ಗುರಿಯನ್ನು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಶೇಕಡ 17ರಷ್ಟು ಕಾರ್ಮಿಕರನ್ನು ಕೈಬಿಡಬೇಕಾದ ಸಂದರ್ಭ ಒದಗಿಬಂದಿದೆ ಎಂದು ಹೇಳಿಕೊಂಡಿದೆ.
ಯುಎಸ್ನಲ್ಲಿ ಒಟ್ಟು 10400 ಜನ ಕೆಲಸ ಮಾಡುತ್ತಿದ್ದು, 2019ರಲ್ಲಿ ಜಗತ್ತಿನಾದ್ಯಂತ 86 ಸಾವಿರಕ್ಕೂ ಹೆಚ್ಚು ಮಂದಿಗೆ ಈ ಕಂಪನಿ ಉದ್ಯೋಗದ ಆಸರೆ ನೀಡಿತ್ತು. ಆದರೆ ಇದೀಗ ಕಂಪನಿ ನಷ್ಟದಲ್ಲಿರುವ ಕಾರಣ ಇಂತಹ ಕೆಲಸವನ್ನು ಮಾಡಬೇಕಾಗಿದೆ ಎಂದು ಕಂಪನಿ ತಿಳಿಸಿದೆ.