ನವದೆಹಲಿ: ಹೆಚ್ ಡಿ ಎಫ್ ಸಿ ಸೇರಿದಂತೆ ಹಲವು ಬ್ಯಾಂಕ್ ಗಳಿಂದ 300 ಕೋಟಿ ರೂಪಾಯಿ ಸಾಲ ಪಡೆದು ವಂಚಿಸುತ್ತಿರುವ ಖಾಸಗಿ ಕಂಪನಿ ಸಿ ಎಸ್ ಓ ಶರ್ಮ ಅವರನ್ನು ಪೊಲೀಸರು ಆರ್ಥಿಕ ಅಪರಾಧದ ಆರೋಪದ ಮೇಲೆ ಬಂಧಿಸಿದ್ದಾರೆ.
ಝೆನಿಕಾ ಕಾರ್ ಸಂಸ್ಥೆಯ ಸಿಎಫ್ ಓ ವೈಭವ್ ಶರ್ಮ ಹೆಚ್ ಡಿ ಎಫ್ ಸಿ ಬ್ಯಾಂಕ್ ನಿಂದ 102 ಕೋಟಿ ರುಪಾಯಿ ಹಣವನ್ನು ಪಡೆದು ದುರುಪಯೋಗ ಪಡಿಸಿಕೊಂಡಿದೆ ಎಂದು ಬ್ಯಾಂಕ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಪೊಲೀಸರಿಗೆ ಅವರ ಇನ್ನಿತರೆ ವಂಚನೆಗಳು ತಿಳಿದುಬಂದು ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಧಿಕಾರಿಗಳ ಪ್ರಕಾರ ಆರೋಪಿ ವೈಭವ್ ಶರ್ಮ ಕಂಪನಿಯ ಹೆಸರಿನಲ್ಲಿ 2007ರಲ್ಲಿ ಸಾಲ ಪಡೆದಿದ್ದರು. ಹಾಗೂ 2018ರವರೆಗೆ ಎಲ್ಲವೂ ಸರಿಯಾಗಿಯೇ ನಡೆಯುತ್ತಿತ್ತು. ಆದರೆ ಬ್ಯಾಂಕ್ ಅಧಿಕಾರಿಗಳು ಕಾರ್ ಶೋರೂಮ್ ಇಗೆ ಭೇಟಿ ನೀಡಿದಾಗ 200 ಕಾರುಗಳು ಇರಬೇಕಾದ ಸ್ಥಳದಲ್ಲಿ ಕೇವಲ 29 ಕಾರುಗಳು ಕಂಡುಬಂದಾಗ ಮೋಸದ ಶಂಕೆ ಮೂಡಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಶರ್ಮ ಹಾಗೂ ಮತ್ತಿಬ್ಬರ ಮೇಲೆ ದೂರನ್ನು ದಾಖಲಿಸಿದ್ದು, ಪೊಲೀಸರು ತನಿಕೆ ಪ್ರಾರಂಭಿಸಿದ್ದರು.