ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣ ಕೊಂಚ ಕಡಿಮೆ ಆಗುತ್ತಾ ಇದ್ದರೂ, ಒಟ್ಟು ಪ್ರಕರಣಗಳ ಸಂಖ್ಯೆಯು ಶುಕ್ರವಾರಕ್ಕೆ ಒಂದು ಕೋಟಿಯ ಗಡಿಯನ್ನ ದಾಟಿ ಮುಂದೆ ಹೋಗಿದೆ.
ಇಲ್ಲಿಯವರೆಗೆ ಅಂದರೆ ಶುಕ್ರವಾರದ ಅಂತ್ಯಕ್ಕೆ ದೇಶದಲ್ಲಿ ಒಟ್ಟು 1,00,04,436 ಕೋವಿಡ್- 19 ಪ್ರಕರಣಗಳು ದೃಢಪಟ್ಟಿದ್ದು, 1,45,119 ಜನರು ದೇಶದಲ್ಲಿ ಇದುವರೆಗೆ ಸಾವನಪ್ಪಿದ್ದಾರೆ. ದೇಶದಲ್ಲಿ ಒಟ್ಟು 3,13,831 ಕೋವಿಡ್-19 ಸಕ್ರಿಯ ಪ್ರಕರಣಗಳಿವೆ.
ಇದುವರೆಗೆ ಕೊರೊನಾ ವೈರಸ್ ಸೋಂಕಿನಿಂದ 95,20,827 ಮಂದಿ ಗುಣಮುಖರಾಗಿದ್ದು, 95.40 ರಷ್ಟು ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಜಾಗತಿಕವಾಗಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ,ಭಾರತದಲ್ಲಿ ಎರೆಡನೆ ಅತಿ ಹೆಚ್ಚು ಸೋಂಕು ಪ್ರಕರಣಗಳು ದೃಢಪಟ್ಟಿವೆ.