ದುಬೈ: ಭಾರತ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಗೆ ತಯಾರು ಮಾಡುತ್ತಿದೆ ಎಂದು ಆಧಾರರಹಿತ ಆರೋಪವನ್ನು ಪಾಕಿಸ್ತಾನ ಮಾಡುತ್ತಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮದ್ ಕುರೇಶಿ ಈ ಆರೋಪ ಮಾಡಿದ್ದು, ಭಾರತ ತನ್ನ ಮಿತ್ರ ರಾಷ್ಟ್ರವಾದಿಂದ ಸಹಾಯ ಪಡೆದು ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲು ಸಜ್ಜಾಗುತ್ತಿದೆ. ಈ ಕುರಿತು ಖಚಿತ ಮಾಹಿತಿಯನ್ನು ಗುಪ್ತಚರ ಸಂಸ್ಥೆಗಳು ನೀಡಿದೆ ಎಂದು ಸಮರ್ಥಿಸಿಕೊಂಡರು.
ಇಷ್ಟೇ ಅಲ್ಲದೆ, ಭಾರತದ ಸೈನಿಕರು ವಿಶ್ವಸಂಸ್ಥೆಯ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿವೆ ಎಂದು ಪಾಕಿಸ್ತಾನ ಭಾರತದ ವಿರುದ್ಧ ಅಪಪ್ರಚಾರ ಮಾಡಲು ಪುನಹ ಪ್ರಾರಂಭಿಸಿದೆ.
ಪಾಕಿಸ್ತಾನದ ಎಲ್ಲಾ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಭಾರತ, ಅವರ ಹೇಳಿಕೆಗಳಲ್ಲ ಒಂದು ಸುಳ್ಳಿನ ಕಂತೆ ಎಂದು ಹೇಳಿದೆ.