ನಾಗ್ಪುರ: ಆರ್ ಎಸ್ ಎಸ್ ನ ಹಿರಿಯ ವಿಚಾರವಾದಿ ಮತ್ತು ಆ ಸಂಘಟನೆಯ ಮೂಲ ವಕ್ತಾರರಾದ ಮಾಧವ್ ಗೋವಿಂದ್ ವೈದ್ಯ ಡಿಸೆಂಬರ್ 19ರ ಮಧ್ಯಾಹ್ನ ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
97 ವರ್ಷದ ವಯಸ್ಸಿನ ಗೋವಿಂದ ವೈದ್ಯ ಕೋವಿಡ್ 19 ವೈರಸ್ ಗೆ ತುತ್ತಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ನಂತರ ಅವರಲ್ಲಿ ಚೇತರಿಕೆ ಕಂಡಿತು ಎಂದು ಮಾದವ್ ಅವರ ಮೊಮ್ಮಗ ವಿಷ್ಣು ವೈದ್ಯ ತಿಳಿಸಿದರು. ಆದರೆ ಶುಕ್ರವಾರ ಅವರ ಆರೋಗ್ಯ ಇದ್ದಕ್ಕಿದ್ದ ಹಾಗೆ ಹದಗೆಟ್ಟಿದ್ದು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಪ್ರಾರಂಭಿಸಿದರು. ಆದರೂ ಉಪಯೋಗವಾಗಲಿಲ್ಲ ಎಂದು ಹೇಳಿದರು.