ನವದೆಹಲಿ: ದೆಹಲಿಯ ಗುರುದ್ವಾರಕ್ಕೆ ಇಂದು ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಅಚಾನಕ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ದೆಹಲಿಯಲ್ಲಿರುವ ರಕಂಬ್ ಗಂಜ್ ಗುರುದ್ವಾರಕ್ಕೆ ಭೇಟಿ ನೀಡಿದ ಪ್ರಧಾನಿ ಗುರು ತೇಜ್ ಬಹುದ್ದೂರ್ ಅವರಿಗೆ ವಂದಿಸಿ ಆಶೀರ್ವಾದ ಪಡೆದರು. ಅದರ ಮೂಲಕ ತೇಜ್ ಬಹದ್ದೂರ್ ಅವರು ಹುತಾತ್ಮರಾದ ಇಂದಿನ ದಿನವನ್ನು ಆಚರಿಸಿದರು.
ಈ ದಿಡೀರ್ ಭೇಟಿಯನ್ನು ರೈತರ ಪರ ನಾವಿದ್ದೇವೆ ಎಂದು ಸಾರುವುದಕ್ಕಾಗಿ ಮೋದಿ ಕೈಗೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.