ರಾಜಸ್ಥಾನ: ರಾಜಸ್ಥಾನದ ನೀಮ್ರಾನಾದಲ್ಲಿ ಐವರು ಪುರುಷರು ಶುಕ್ರವಾರ 2 ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ತ್ರೀ ಸ್ಟಾರ್ ಹೋಟೆಲ್ನ ಉದ್ಯೋಗಿಗಳಾಗಿರುವ ಇಬ್ಬರು ಮಹಿಳೆಯರನ್ನು ಆರೋಪಿಗಳು ಗನ್ಪಾಯಿಂಟ್ನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಇಬ್ಬರು ಮಹಿಳೆಯರನ್ನು ಪೊಲೀಸರು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ಆರೋಪಿಗಳನ್ನು ನರೇಶ್ ಗುಜ್ಜರ್, ಲೋಕೇಶ್, ರಾಹುಲ್, ದನ್ವೀರ್ ಮತ್ತು ರಾಜಕುಮಾರ ತಿವಾರಿ ಎಂದು ಗುರುತಿಸಲಾಗಿದೆ. ಆರೋಪಿಗಳು ಶುಕ್ರವಾರ ಹೋಟೆಲ್ಗೆ ಪ್ರವೇಶಿಸಿ, ಅವರಿಗೆ ಲೈಂಗಿಕ ಕಾರ್ಯಕರ್ತರನ್ನು ವ್ಯವಸ್ಥೆ ಮಾಡುವಂತೆ ವ್ಯವಸ್ಥಾಪಕರಿಗೆ ಒತ್ತಡ ಹಾಕಿದ್ದರು ಎಂದು ತಿಳಿದುಬಂದಿದೆ.
ಇಬ್ಬರು ಆರೋಪಿಗಳು ಮಹಿಳಾ ಸಿಬ್ಬಂದಿ ಮಲಗಿದ್ದ ಕೋಣೆಗಳಿಗೆ ಬಲವಂತವಾಗಿ ಪ್ರವೇಶಿಸಿದರು. ನಂತರ ಆರೋಪಿಗಳು ಇಬ್ಬರು ಮಹಿಳೆಯರನ್ನು ಗನ್ ಪಾಯಿಂಟ್ನಲ್ಲಿ ಅತ್ಯಾಚಾರ ಮಾಡಿದರೆ, ಅವರಲ್ಲಿ ಮೂವರು ಕಾವಲು ಕಾಯುತ್ತಿದ್ದರು ಎನ್ನಲಾಗಿದೆ.