ಅಫ್ಘಾನಿಸ್ತಾನ: ಕಾರಿನಲ್ಲಿ ಬಾಂಬ್ ಇರಿಸಿ ಸ್ಫೋಟಗೊಳಿಸಿದ ಘಟನೆ ಅಫ್ಘಾನಿಸ್ಥಾನದ ರಾಜಧಾನಿಯಾಗಿರುವ ಕಾಬೂಲ್ ನಲ್ಲಿ ನಡೆದಿದ್ದು, ಎಂಟು ಮಂದಿ ಸಾವನ್ನಪ್ಪಿದ್ದಾರೆ.
ಉಗ್ರರು ಇಲ್ಲಿನ ಸಂಸದ ಖಾನ್ ಮೊಹಮ್ಮದ್ ವರ್ದಕ್ ಅವರನ್ನು ಗುರಿಯಾಗಿಸಿ ದಾಳಿ ನಡೆಸಿದ್ದು ಪರಿಣಾಮ ಶಾಸಕ ಸಣ್ಣಪುಟ್ಟ ಗಾಯಗಳಿಂದ ಪಾರಾದರೆ. ಆದರೆ ದಾಳಿಯ ಸಮಯದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯಗಳಾಗಿವೆ ಎಂದು ಅಫ್ಘಾನಿಸ್ತಾನದ ಸಚಿವಾಲಯ ತಿಳಿಸಿದ.
ಲೋಗರ್, ನಂಗರ್ಹಾರ್, ಹೆಲ್ಮಂಡ್ ಮತ್ತು ಬಡಾಖಾನ್ ಪ್ರಾಂತ್ಯಗಳಲ್ಲಿ ರವಿವಾರ ಪ್ರತ್ಯೇಕ ಬಾಂಬ್ ಸ್ಫೋಟಗಳು ನಡೆದಿದ್ದು ಘಟನೆಯಲ್ಲಿ ಸಾವನ್ನಪ್ಪಿದವರಲ್ಲಿ, ಹಲವು ನಾಗರಿಕರು ಹಾಗೂ ಭದ್ರತಾ ಸಿಬ್ಬಂದಿಗಳು ಎನ್ನಲಾಗುತ್ತಿದೆ.
ಕಳೆದ ಶುಕ್ರವಾರ ಮಧ್ಯ ಘಜ್ನಿ ಪ್ರಾಂತ್ಯದಲ್ಲಿ ರಿಕ್ಷಾವೊಂದರಲ್ಲಿ ಬಾಂಬ್ ಸ್ಫೋಟ ನಡೆಸಿ 11 ಮಕ್ಕಳು ಸೇರಿದಂತೆ ಕನಿಷ್ಠ 15 ನಾಗರಿಕರು ಸಾವನ್ನಪ್ಪಿದ್ದರು. ಅಷ್ಟೇ ಅಲ್ಲದೆ ಕೇವಲ ಮೂರು ತಿಂಗಳಲ್ಲಿ ಅಫ್ಘಾನಿಸ್ತಾನದ ಹಲವೆಡೆ ಬಾಂಬ್ ಸ್ಫೋಟಗಳು ನಡೆದಿದ್ದು, ಅದರಲ್ಲಿ 35 ಆತ್ಮಾಹುತಿ ಬಂಗಳು ಹಾಗೂ 507 ಸ್ಪೋಟಕಗಳನ್ನು ಉಪಯೋಗಿಸುವುದರ ಮೂಲಕ 487 ಮಂದಿ ತಾಲಿಬಾನ್ ನಾಗರಿಕರನ್ನು ಉಗ್ರರು ಹತ್ಯೆಗೈದಿದ್ದರು. ಹಾಗೆಯೇ ಈ ದಾಳಿಗಳಿಂದ ಸಾವಿರಕ್ಕೂ ಹೆಚ್ಚು ಜನರಿಗೆ ತೀವ್ರ ಗಾಯಗಳು ಉಂಟಾಗಿದ್ದವು ಎಂದು ಸಚಿವಾಲಯ ವರದಿಯನ್ನು ನೀಡಿದೆ.