ಪುಣೆ: ಇತ್ತೀಚಿನ ದಿನಗಳಲ್ಲಿ ವೈದ್ಯರನ್ನು ಕಣ್ಣು ಮುಚ್ಚಿ ನಂಬಲು ಸಾಧ್ಯವಾಗದ ಘಟನೆಗಳು ನಡೆಯುತ್ತಿದೆ. ಅದಕ್ಕೆ ಸಾಕ್ಷಿಯಾಗಿ ಮಹಾರಾಷ್ಟ್ರದ ಪುಣೆಯಲ್ಲಿ ನಿಮಗೆ ಕ್ಯಾನ್ಸರ್ ಇದೆ ಎಂದು ಹೇಳಿ ವೈದ್ಯ ಒಬ್ಬಳು ತನ್ನ ಸ್ನೇಹಿತೆಗೆ 1. 47ಕೋಟಿ ರೂಪಾಯಿಗಳನ್ನು ವಂಚಿಸಿರುವ ಘಟನೆ ನಡೆದಿದೆ.
3 ವರ್ಷಗಳ ಹಿಂದೆ ಪೂರ್ಣಯ್ಯ ರಕ್ಷಣಾ ಖಾತೆಗಳ ಪ್ರಧಾನ ನಿಯಂತ್ರಕದಲ್ಲಿ ಲೆಕ್ಕ ಪರಿಶೋಧಕರಾಗಿ ಕೆಲಸ ಮಾಡುತ್ತಿದ್ದ ಸುಷ್ಮಾ ಜಾದವ್ ಅವರಿಗೆ ವಿದ್ಯಾ ಧನಂಜಯ್ ಎಂಬ ವೈದ್ಯರು ಪರಿಚಯವಾಗುತ್ತಾರೆ. ಅದಾದ ಬಳಿಕ ಯಾವುದೋ ಸಣ್ಣ ನೋವಿದೆಯೆಂದು ಅವರ ಬಳಿ ಹೋದಾಗ ನಿಮಗೆ ಲಿವರ್ ಕ್ಯಾನ್ಸರ್ ಇದೆ ಎಂದು ವೈದ್ಯ ಹೇಳಿ ಅವರನ್ನು ನಂಬುವಂತೆ ಹಲವಾರು ಚಿತ್ರಗಳನ್ನು ತೋರಿಸುತ್ತಾರೆ.
ವೈದ್ಯನ ನಂಬಿದ ಸುಷ್ಮಾ ಅವರು ಹೇಳಿದಂತೆಯೇ ಚಿಕಿತ್ಸೆಗಳನ್ನು ಪಡೆಯಲು ಪ್ರಾರಂಭಿಸುತ್ತಾರೆ. ಹಾಗೂ 1.45 ಕೋಟಿ ರೂಪಾಯಿಯ ಚೆಕ್ ಮತ್ತು 1.75 ಲಕ್ಷ ರೂಪಾಯಿಯ ನಗದನ್ನು ವಿದ್ಯಾಳಿಗೆ ನೀಡಿದ್ದಾಳೆ. ಜೂನ್ ನಿಂದ ಡಿಸೆಂಬರ್ ವರೆಗೂ ಇದೇ ರೀತಿಯ ಚಿಕಿತ್ಸೆಯನ್ನು ಪಡೆದ ನಂತರ ಅನುಮಾನಗೊಂಡ ಸುಷ್ಮಾ ವೈದ್ಯ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ಯದಾರೆ.