ಹರಿಯಾಣ: ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ ಸಿಟ್ಟಿನಲ್ಲಿ ಆಸ್ಪತ್ರೆಯೊಳಗೆ ವಾಹನ ನುಗ್ಗಿಸಿ ಹಾನಿಗೊಳಿಸಿದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ತನ್ನ ಕುಟುಂಬದ ಇಬ್ಬರು ಹಿರಿಯರಿಗೆ ಆರೋಗ್ಯ ಹದಗೆಟ್ಟ ಕಾರಣ ವ್ಯಕ್ತಿ ವೈದ್ಯರ ಬಳಿ ಕರೆತಂದಿದ್ದಾನೆ. ಆದರೆ ಚಿಕಿತ್ಸೆ ಕೊಡಲು ಒಲ್ಲೆ ಎಂದ ವೈದ್ಯರ ಮೇಲೆ ಹರಿಹಾಯ್ದು, ಅವರಿಬ್ಬರ ನಡುವೆ ವಾಗ್ದಾಳಿ ನಡೆದಿದೆ. ತದನಂತರ ಸಿಟ್ಟಿನಿಂದ ಹೊರಹೋದ ವ್ಯಕ್ತಿ ತನ್ನ ವಾಹನವನ್ನು ಆಸ್ಪತ್ರೆಯೊಳಗೆ ನುಗ್ಗಿಸಿ ಅಲ್ಲಿನ ವಸ್ತುಗಳನ್ನು ಹಾನಿಗೊಳಿಸಿ ಪರಾರಿಯಾಗಿದ್ದಾನೆ.
ಈ ಗಟನೆ ಇಂದ ಆಸ್ಪತ್ರೆಯ ಮೆಡಿಕಲ್ ಸ್ಟೋರ್ ಸೇರಿದಂತೆ ಹತ್ತರಿಂದ ಹದಿನೈದು ವಾಹನಗಳು ಹಾನಿಗೊಳಗಾಗಿವೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ವ್ಯಕ್ತಿಗಾಗಿ ಶೋಧ ನಡೆಯುತ್ತಿದೆ.