ನವದೆಹಲಿ: ಭಾರತವು ತನ್ನ ಕೋವಿಡ್ -19 ಲಸಿಕೆ ನೀಡುವುದನ್ನು 2021 ರ ಜನವರಿಯಲ್ಲಿ ಪ್ರಾರಂಭಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸೋಮವಾರ ಹೇಳಿದ್ದಾರೆ.
ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಅವರು ಪ್ರತಿಪಾದಿಸಿದರು.
ಕೋವಿಡ್ -19 ಲಸಿಕೆ ಮತ್ತು ಸಂಶೋಧನೆಗೆ ಸಂಬಂಧಿಸಿದಂತೆ ಭಾರತವು ಯಾವುದೇ ದೇಶಕ್ಕಿಂತ ಕಡಿಮೆಯಿಲ್ಲ. ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವ ನಮ್ಮ ಮೊದಲ ಆದ್ಯತೆಯಾಗಿದೆ. ಅದನ್ನ ನಿರ್ವಹಿಸುವವರು ಅವುಗಳನ್ನು ಗಂಭೀರತೆಯಿಂದ ವಿಶ್ಲೇಷಿಸುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಸ್ಥಳೀಯ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಭಾರತೀಯ ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರು ಕೆಲಸ ಮಾಡಿದ್ದಾರೆ ಮತ್ತು ಮುಂಬರುವ ಆರರಿಂದ ಏಳು ತಿಂಗಳಲ್ಲಿ ಸುಮಾರು 30 ಕೋಟಿ ಜನರಿಗೆ ಚುಚ್ಚುಮದ್ದನ್ನು ನೀಡುವ ಸಾಮರ್ಥ್ಯ ಭಾರತಕ್ಕೆ ಇರುತ್ತದೆ ಎಂದಿದ್ದಾರೆ.