ಲಂಡನ್: ಇದೀಗ ಬ್ರಿಟನ್ ನಲ್ಲಿ ಹೊಸ ರೂಪದಲ್ಲಿ ಕೊರೋನಾ ವೈರಸ್ ಎಲ್ಲೆಡೆ ಪತ್ತೆಯಾಗುತ್ತಿದ್ದು, ಇದೇ ಹಿನ್ನೆಲೆಯಲ್ಲಿ ಮತ್ತೆ ಹಲವು ರಾಷ್ಟ್ರಗಳು ಬ್ರಿಟನ್ ಜೊತೆಗಿನ ಸಂಪರ್ಕ ಸಂಬಂಧವನ್ನು ಕಡಿದುಕೊಳ್ಳಲು ಮುಂದಾಗಿವೆ.
ಬ್ರಿಟನ್ನಲ್ಲಿ ಪತ್ತೆಯಾಗಿರುವ ಹೊಸರೂಪದ ಕರೋನ ವೈರಸ್ ಎಲ್ಲರಲ್ಲೂ ಆತಂಕ ಮೂಡಿಸಿದ್ದು, ಸ್ವತಹ ಬ್ರಿಟನ್ ಸರಕಾರವೇ ಇದು ನಮ್ಮ ಕೈಮೀರಿ ಹೋಗಿದೆ ಎಂದು ಹೇಳಿಕೆ ನೀಡಿದ್ದಾರೆ. ಹೊಸ ಪ್ರಕಾರದ ವೈರೆಸ್ ಬ್ರಿಟನ್ನ ಮಾತ್ರವಲ್ಲದೆ ಡೆನ್ಮಾರ್ಕ್, ನೈದನಿಕ್ ಲ್ಯಾಂಡ್ನಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತದೆ.
ಮುಂಚೆಯೇ ಕೊರೋನಾ ವೈರಸ್ ಗಳಿಗಿಂತಲೂ ಇದು ಹೆಚ್ಚು ಅಪಾಯಕಾರಿಯಾಗಿದ್ದು, ಇದರ ಹರಡುವಿಕೆ ಶೇಕಡ 70ರಷ್ಟು ಹೆಚ್ಚಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಅಷ್ಟಲ್ಲದೆ ಯುರೋಪಿನ ಹೆಚ್ಚಿನ ಎಲ್ಲ ರಾಷ್ಟ್ರಗಳಿಗೂ ಈ ವೈರಸ್ ಈಗಾಗಲೇ ಹರಡಿದೆ ಎಂದು ಊಹಿಸಲಾಗಿದೆ. ಈ ಕಾರಣದಿಂದಲೇ ಬ್ರಿಟನ್ ನಗರಪ್ರದೇಶಗಳಲ್ಲಿ ಮತ್ತೆ ಕಠಿಣ ಲಾಕ್ ಡೌನ್ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ.
ಬ್ರಿಟನ್ ನ ಹಲವಾರು ಪ್ರದೇಶಗಳಲ್ಲಿ ಭಾನುವಾರದಿಂದಲೇ ಜಾರಿಯಾಗಿದ್ದು, ಡಿಸೆಂಬರ್ 26ರಿಂದ ಇನ್ನಷ್ಟು ಪ್ರದೇಶಗಳು ಬಿಗಿ ಆಗಲಿವೆ. ಅಷ್ಟೇ ಅಲ್ಲದೆ ಕ್ರಿಸ್ಮಸ್ ಮತ್ತು ಹೊಸ ವರ್ಷಗಳನ್ನು ಜನರು ಒಟ್ಟಾಗಿ ಸೇರಿ ಆಚರಿಸುವಂತಿಲ್ಲ ಎಂಬ ಕಟ್ಟಾಜ್ಞೆ ಹೊರಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತದೆ.
ಹೊಸ ರೀತಿಯ ಸೋಂಕಿನ ಬಗ್ಗೆ ಎಚ್ಚರದಿಂದಿರಲು ಮತ್ತು ಅದನ್ನು ಹರಡದಂತೆ ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಯುರೋಪ್ ರಾಷ್ಟ್ರಗಳಿಗೆ ಸೂಚನೆ ನೀಡಿದೆ.