ನವದೆಹಲಿ: ಬ್ರಿಟನ್ ಮತ್ತು ಭಾರತವನ್ನು ಸಂಪರ್ಕಿಸುವ ಎಲ್ಲಾ ವಿಮಾನಗಳನ್ನು ಬುಧವಾರದಿಂದ ಡಿಸೆಂಬರ್ 31 ರವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದೆ.
ಬ್ರಿಟನ್ ನಲ್ಲಿ ಕೊರೋನ ವೈರಸ್ ಹೊಸ ಅಲೆಯಲ್ಲಿ ಪ್ರಾರಂಭವಾಗಿದ್ದು ಅದನ್ನ ನಿಯಂತ್ರಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಬ್ರಿಟನ್ ಮತ್ತು ಭಾರತವನ್ನು ಸಂಪರ್ಕಿಸುವ ವಿಮಾನಗಳ ರದ್ದತಿ ಮಾಡಿರುವುದು ಗೋವಾದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುತ್ತದೆ ಎಂದು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೋಮವಾರ ಹೇಳಿದ್ದಾರೆ.
“ಇಂಗ್ಲೆಂಡ್ ಮತ್ತು ರಷ್ಯಾದಿಂದ ಬರುವ ವಿಮಾನಗಳ ರದ್ದತಿ ಖಂಡಿತವಾಗಿಯೂ ಗೋವಾದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುತ್ತದೆ, ಇದು ಅಂತರರಾಷ್ಟ್ರೀಯ ಪ್ರವಾಸಿಗರ ಮೇಲೆ ಕೂಡಾ ಅವಲಂಬಿತವಾಗಿದೆ ಎಂದು ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದರು.
ಕೆಲವು ದೇಶಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆ ಪ್ರಾರಂಭವಾಗಿದೆ. ಇಂತಹ ಸನ್ನಿವೇಶದಲ್ಲಿ, ನಾವು ಸಹ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿದೆ” ಎಂದು ಸಾವಂತ್ ಅವರು ಹೇಳಿದ್ದು, ಕರಾವಳಿ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಹೇರುವುದನ್ನು ತಳ್ಳಿಹಾಕಿದರು.
“ಗೃಹ ಸಚಿವಾಲಯದ ರಾತ್ರಿ ಕರ್ಫ್ಯೂ ಬಗ್ಗೆ ಅಂತಹ ಯಾವುದೇ ಮಾರ್ಗಸೂಚಿಗಳಿಲ್ಲ” ಎಂದು ಅವರು ಹೇಳಿದ್ದಾರೆ.