ನವದೆಹಲಿ: ಕೊರೋನಾ ಸೋಂಕಿನ ಹಾಗೂ ಹೊಸ ರೂಪದಲ್ಲಿ ಕರೋನ ಆಕ್ರಮಣದ ಭೀತಿಯ ಹಿನ್ನೆಲೆಯಲ್ಲಿ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಸುವುದಾಗಿ ಘೋಷಿಸಿದ್ದ ಸಿಬಿಎಸ್ ಇ 10ನೇ ಹಾಗೂ 12ನೇ ತರಗತಿಗಳ ಬೋರ್ಡ್ ಪರೀಕ್ಷೆಯನ್ನು ಮುಂದೂಡುವ ಬಗ್ಗೆ ಸೂಚನೆ ನೀಡಿದ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್.
ಮಂಗಳವಾರ ಶಿಕ್ಷಕರೊಂದಿಗೆ ನಡೆದ ಸಂವಾದದಲ್ಲಿ ಕೇಂದ್ರ ಶಿಕ್ಷಣ ಸಚಿವ ರೇವಣ್ಣ ಪೋಕ್ರಿಯಾಲ್, ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಚರ್ಚೆಯಲ್ಲಿ ಪ್ರಸ್ತುತ ಈ ಸಮಯ ಪರೀಕ್ಷೆಗಳಿಗೆ ಸೂಕ್ತವಲ್ಲ ಎಂದು ಪರಿಗಣಿಸಿ ಪರೀಕ್ಷೆಯನ್ನು ಮುಂದೂಡುವ ಬಗ್ಗೆ ತಿಳಿಸಿದರು.