ಲಂಡನ್: ನೀರಿನ ಮಾರಾಟ ಪ್ರಾರಂಭವಾದ ಇದೊಂದು ಬಾಕಿ ಇತ್ತು ಎಂದು ಹೇಳಿದವರು ಉಂಟು. ಹಾಗೆಯೇ ಗಾಳಿಯ ಮಾರಾಟವೂ ಇನ್ನೂ ಮಾರಾಟವಾಗಲು ಬಾಕಿ ಇದೆ ಎಂಬ ಮಾತುಗಳು ಅದೆಷ್ಟು ಜನರ ಬಾಯಿಂದ ಹೊರ ಬಂದಿದೆ. ಇದೀಗ ಅದು ಸತ್ಯ ಎಂದು ಸಾಬೀತು ಆದಂತಾಗಿದೆ.
ಹೌದು, ಲಂಡನ್ ನಲ್ಲಿ ಕೋರೋನ ರೂಪಾಂತರ ಹೊಂದಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಇದನ್ನು ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ. ಶುದ್ಧ ಗಾಳಿಗಾಗಿ ಜನರು ಪರಿತಪಿಸುತ್ತಿದ್ದು, ಹಣ ನೀಡಿಯೂ ಪಡೆಯಲು ಸಿದ್ಧರಾಗಿದ್ದಾರೆ. ಅಚ್ಚರಿ ಎಂದರೆರೆ ಇದಕ್ಕೆ ಆ ಪ್ರದೇಶದಲ್ಲಿ ಚಾಲನೆಯೂ ದೊರೆತಿದೆ.
ಬೇರೆ ಬೇರೆ ನಾಲ್ಕು ದೇಶಗಳಿಂದ ಶುದ್ಧಗಾಳಿಯನ್ನು ತರಿಸಿಕೊಂಡು ಅದನ್ನು ಬಾಟಲಿಯಲ್ಲಿ ತುಂಬಿ ಮಾರಾಟ ಮಾಡುತ್ತಿರುವುದಾಗಿ ಸರ್ಕಾರ ಹೇಳಿದೆ.ಪ್ರತಿ ಬಾಟಲಿಯು ಕಾರ್ಕ್ ಸ್ಟಾಪರ್ನೊಂದಿಗೆ ಬರುತ್ತದೆ. ಆದ್ದರಿಂದ ಜನರು ಅದನ್ನು ಒಂದು ಕ್ಷಣ ತೆರೆದು ಉಸಿರಾಡಬಹುದು ಮತ್ತೆ ಮತ್ತೆ ಮುಚ್ಚಿಡಬೇಕು. ಮತ್ತೊಮ್ಮೆ ಉಸಿರಾಡಬೇಕೆಂದರೆ ಮತ್ತೆ ಹಾಗೆಯೇ ಮಾಡಬೇಕು.
ಸದ್ಯ ಬ್ರಿಟನ್ನರಿಗೆ ಶುದ್ಧಗಾಳಿಯ ಅವಶ್ಯಕತೆ ಇದ್ದು, ಉಳ್ಳವರು ಈ ಬಾಟಲಿಯನ್ನು ಖರೀದಿಸಿ ಶುದ್ಧ ಗಾಳಿಯನ್ನು ಸೇವನೆ ಮಾಡುತ್ತಿದ್ದಾರೆ. ಮುಖ್ಯವಾಗಿ 500 ಮಿಲಿ ಗಾಳಿಗೆ ಎರಡೂವರೆ ಸಾವಿರ ರೂಪಾಯಿಯಂತೆ ಮಾರಾಟವಾಗುತ್ತಿದೆ. ವೆಬ್ಸೈಟ್ ಮೂಲಕ ಈ ಗಾಳಿಯನ್ನು ಯಾರು ಬೇಕಾದರೂ ಖರೀದಿ ಮಾಡಲು ಅವಕಾಶ ಕೂಡ ಕಲ್ಪಿಸಲಾಗಿದೆ.