ತಿರುವನಂತಪುರ: ಪ್ರಧಾನಿ ಮೋದಿ ಅವರು ಜನವರಿ 05ರಂದು ಕೊಚ್ಚಿ ಮತ್ತು ಮಂಗಳೂರು ನಡುವೆ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ (ಗೇಲ್) ನಿರ್ಮಿಸಿರುವ ಅನಿಲ ಕೊಳವೆಮಾರ್ಗವನ್ನು ಆನ್ಲೈನ್ ಮೂಲಕ ಉದ್ಘಾಟಿಸಲಿದ್ದರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ತಿಳಿಸಿದ್ದಾರೆ.
ಈ ಅನಿಲ ಕೊಳವೆ ಮಾರ್ಗ 444 ಕಿ.ಮೀ. ಉದ್ದವಿದ್ದು, ಈ ಮಾರ್ಗವನ್ನು ಅಳವಡಿಸುವ ಕಾರ್ಯ 2009ರಲ್ಲಿ ಆರಂಭಗೊಂಡಿತು. ಸುಮಾರು ₹ 2,915 ಕೋಟಿ ವೆಚ್ಚದ ಈ ಯೋಜನೆ 2014 ರಲ್ಲಿಯೇ ಪೂರ್ಣಗೊಳ್ಳಬೇಕಿತ್ತು. ಆದರೆ, ಸುರಕ್ಷತಾ ಕ್ರಮಗಳು, ಸ್ವಾಧೀನಪಡಿಸಿಕೊಂಡ ಭೂಮಿ ಬೆಲೆಯಲ್ಲಿ ಹೆಚ್ಚಳದಂತಹ ಅಡ್ಡಿಗಳಿಂದಾಗಿ ಯೋಜನೆ ಪೂರ್ಣಗೊಳ್ಳುವುದು ನಿಧಾನವಾಗಿ ಇದೀಗ ಉದ್ಘಾಟನೆಗೆ ಸಜ್ಜಾಗಿದೆ.
ಪರಿಷ್ಕೃತ ಯೋಜನೆ ವೆಚ್ಚ ₹ 5,750 ಇದ್ದು ಮೂಲ ಯೋಜನೆಗಿಂತಲೂ 2,835 ಸಾವಿರ ಕೋಟಿ ಹೆಚ್ಚಾಗಿದೆ ಎಂದು ಮೂಲಗಳು ಹೇಳಿವೆ.