News Kannada
Monday, January 30 2023

ದೇಶ-ವಿದೇಶ

ಬಾರಾಮುಲ್ಲಾದಲ್ಲಿ ಸೇನೆಯಿಂದ ಹತ್ಯೆಯಾದ ಉಗ್ರರಲ್ಲಿ ಒಬ್ಬ ಪಾಕಿಸ್ತಾನದ ಫುಟ್ಬಾಲ್ ಆಟಗಾರ!

Photo Credit :

ಬಾರಾಮುಲ್ಲಾದಲ್ಲಿ ಸೇನೆಯಿಂದ ಹತ್ಯೆಯಾದ ಉಗ್ರರಲ್ಲಿ ಒಬ್ಬ ಪಾಕಿಸ್ತಾನದ ಫುಟ್ಬಾಲ್ ಆಟಗಾರ!

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಕೊಲ್ಲಲಾಗಿದ್ದು, ಅವರೊಲ್ಲೊಬ್ಬ ಪಾಕಿಸ್ತಾನದಲ್ಲಿ ಫುಟ್ಬಾಲ್ ಆಟಗಾರನಾಗಿದ್ದು, ಕೆಲವೇ ತಿಂಗಳ ಹಿಂದೆ ಉಗ್ರ ಸಂಘಟನೆಗೆ ಸೇರಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಬಾರಾಮುಲ್ಲಾದಲ್ಲಿ ನಿನ್ನೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್ ಕೌಂಟರ್ ನಡೆದಿದ್ದು ಹಮಾಮ್ ಪ್ರದೇಶದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ.

ಹತ್ಯೆಯಾದ ಉಗ್ರರಲ್ಲೊಬ್ಬನನ್ನು ಅಮಿರ್ ಸಿರಾಜ್ ಎಂದು ಗುರುತಿಸಲಾಗಿದ್ದು ಈತ ಪಾಕಿಸ್ತಾನದ ಕಾಲೇಜೊಂದರಲ್ಲಿ ವಿದ್ಯಾರ್ಥಿಯಾಗಿದ್ದ ಮಾತ್ರವಲ್ಲದೆ, ಜೊತೆಗೆ ಫುಟ್ಬಾಲ್ ಆಟಗಾರನಾಗಿದ್ದ. ಈತ ಜುಲೈ 2 ರಿಂದ ನಾಪತ್ತೆಯಾಗಿದ್ದು, ಸಂಬಂಧಿಕರ ಮನೆಯಿಂದ ಫುಟ್ಬಾಲ್ ಪಂದ್ಯಕ್ಕೆಂದು ಹೋದವ ಮತ್ತೆ ಮರಳಿ ಬಂದಿರಲಿಲ್ಲ. ಇದಾದ ನಂತರ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಸೇರಿದ್ದ ಎನ್ನಲಾಗಿದೆ.

ಉಗ್ರರು ಮನೆಯೊಳಗೆ ಅವಿತಿರುವ ನಿಖರ ಮಾಹಿತಿ ಪಡೆದ ಭದ್ರತಾ ಪಡೆಗಳು ಉಗ್ರರು ಅವಿತಿದ್ದ ಮನೆಯನ್ನು ಸುತ್ತುವರಿದು ಶರಣಾಗುವಂತೆ ಸೂಚಿಸಿದ್ದರು. ಆದರೆ ಉಗ್ರರು ಗುಂಡು ಹಾರಿಸಲು ಆರಂಭಿಸಿದ್ದರಿಂದ ಅನಿವಾರ್ಯವಾಗಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದು ಇಬ್ಬರನ್ನು ಕೊಲ್ಲಲಾಗಿದೆ.

See also  ಇಂದಿನ ದಿನಗಳಲ್ಲಿ ಎಲ್ಲವೂ ಸಾಧ್ಯ: ಅರುಣ್ ಜೇಟ್ಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

204
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು