ಇಸ್ರೇಲ್: ಕೊರನ ಭೀತಿಯಿಂದ ಇಸ್ರೇಲ್ ರಾಷ್ಟ್ರ ಮೂರನೇ ಬಾರಿಗೆ ಲಾಕ್ ಡೌನ್ ಗೆ ಸಿದ್ಧವಾಗಿದೆ. ಇದೇ ಭಾನುವಾರದಿಂದ 14 ದಿನಗಳ ಅವಧಿಯ ಲಾಕ್ ಡೌನ್ ವಿಧಿಸಲಾಗುವುದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಲಾಕ್ಡೌನ್ ಡಿಸೆಂಬರ್ 27ರ ಸಂಜೆ 5 ಗಂಟೆಯಿಂದ ಜಾರಿಗೊಳ್ಳಲಿದೆ. ಅಷ್ಟೇ ಅಲ್ಲದೆ ಈ ಲಾಕ್ ಡೌನ್ ಕನಿಷ್ಠ 14ದಿನಗಳ ಅವಧಿಯನ್ನು ಹೊಂದಿರುತ್ತದೆ. ಇದರ ಬಗ್ಗೆ ಅಂತಿಮ ಘೋಷಣೆಯನ್ನು ಹೊರಡಿಸಲು ಕ್ಯಾಬಿನೆಟ್ ಅನುಮೋದನೆ ಬಾಕಿ ಇದೆ ಎಂದು ಪ್ರಧಾನಿ ತಿಳಿಸಿದರು.
ರೂಪಾಂತರ ಹೊಂದಿರುವ ಕರೋನವೈರಸ್ ಇಸ್ರೇಲ್ ದೇಶದಲ್ಲಿ ಹೆಚ್ಚು ಹರಡುತ್ತಿದ್ದು, ಬ್ರಿಟನ್ ನಿಂದ ಹಿಂದಿರುಗಿದ ಮೂರು ಜನರಲ್ಲಿ ಈ ಸೋಂಕು ಕಂಡು ಬಂದಿದೆ ಎಂದು ವರದಿಗಳು ತಿಳಿಸುತ್ತಿವೆ.