News Kannada
Sunday, January 29 2023

ದೇಶ-ವಿದೇಶ

ಕೋವಿಡ್ ಹೊಸ ಅಲೆಯಿಂದ ಯುಎಇಯಲ್ಲಿ ಸಿಲುಕಿರುವ ಭಾರತೀಯರಿಗೆ ಉಚಿತ ವಸತಿ ಸೌಲಭ್ಯ

Photo Credit :

ಕೋವಿಡ್ ಹೊಸ ಅಲೆಯಿಂದ ಯುಎಇಯಲ್ಲಿ ಸಿಲುಕಿರುವ ಭಾರತೀಯರಿಗೆ ಉಚಿತ ವಸತಿ ಸೌಲಭ್ಯ

ದುಬೈ: ಹೊಸ ಸ್ವರೂಪದ ಕೊರೊನಾ ವೈರಾಣು ವ್ಯಾಪಿಸುವುದನ್ನ ತಡೆಯುವುದಕ್ಕಾಗಿ ಸೌದಿ ಅರೇಬಿಯಾ ಹಾಗೂ ಕುವೈತ್‌ ತಮ್ಮ ಗಡಿಗಳನ್ನು ಮುಚ್ಚಿವೆ. ಹಾಗಾಗಿ ಯುಎಇಯಲ್ಲಿ ಸಿಲುಕಿಕೊಂಡಿರುವ ಭಾರತೀಯರು ಸೇರಿದಂತೆ 300ಕ್ಕೂ ಅಧಿಕ ಜನರಿಗೆ ಉಚಿತ ವಸತಿ ಸೌಲಭ್ಯವನ್ನು ನೀಡಲಾಗಿದೆ.

ತಾವು ವಾಸಿಸುತ್ತಿರುವ ರಾಷ್ಟ್ರದಿಂದ ನೇರ ವಿಮಾನ ಸೌಲಭ್ಯ ಇಲ್ಲದ ಕಾರಣ, ಯುಎಇಗೆ ಆಗಮಿಸಿ ಅಲ್ಲಿಂದ ತಮ್ಮ ದೇಶಕ್ಕೆ ಹೋಗಲು ಇವರು ಆಗಮಿಸಿದ್ದರು. ಯುಎಇಯಲ್ಲಿ 14 ದಿನಗಳ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇದ್ದ ಇವರು ತಮ್ಮ ಊರುಗಳಿಗೆ ತೆರಳಲು ಸಜ್ಜಾಗಿದ್ದ ಸಂದರ್ಭದಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೊರೊನಾ ವೈರಾಣು ವೇಗವಾಗಿ ಹರಡುತ್ತಿದೆ ಇದೆ ಕಾರಣದಿಂದ ಸೌದಿ ಅರೇಬಿಯಾ ಹಾಗೂ ಕುವೈತ್‌‌ ಎಚ್ಚೆತ್ತುಕೊಂಡು ಎಲ್ಲ ವಿಮಾನ ಹಾರಾಟವನ್ನೂ ಸ್ಥಗಿತಗೊಳಿಸಿದೆ.

ನಿರ್ಮಾಣ ಕಂಪನಿ ಆಸಾ ಗ್ರೂಪ್‌ ಜೊತೆಗೂಡಿ ಭಾರತೀಯ ಸಾಂಸ್ಕೃತಿಕ ಪ್ರತಿಷ್ಠಾನವು(ಐಸಿಎಫ್‌) ಉಚಿತ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಿದ್ದು, ಸಿಲುಕಿಕೊಂಡವರಲ್ಲಿ ಬಹುತೇಕರು ಕೇರಳ ಮೂಲದವರಾಗಿದ್ದಾರೆ ಎಂದು ಐಸಿಎಫ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಅಬ್ದುಲ್‌ ಸಲಾಮ್‌ ಸಕಾಫಿ ಹೇಳಿದರು.

See also  ಕೋವಿಡ್-19 ಲಸಿಕೆಗೆ ಹನುಮಂತನ ಚಿತ್ರದೊಂದಿಗೆ ಧನ್ಯವಾದ ಸಲ್ಲಿಸಿದ ಬ್ರೆಜಿಲ್ ಪ್ರಧಾನಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

204
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು