ನ್ಯೂಯಾರ್ಕ್: ಮೊಡರ್ನಾ ಕೋರೋನಾ ಲಸಿಕೆ ಪಡೆದಿದು ಈಗ ಸ್ಥಿತಿ ಗಂಭೀರವಾಗಿದ ವೈದ್ಯರೊಬ್ಬರ ಬಗ್ಗೆ ವರದಿಗಳು ಕೇಳಿಬರುತ್ತಿದೆ.
ಅಲರ್ಜಿ ಸಮಸ್ಯೆಯನ್ನು ಎದುರಿಸುತ್ತಿದ್ದ ಬೋಸ್ಟನ್ ವೈದ್ಯರೊಬ್ಬರು ಕೊರೋನಾ ಲಸಿಕೆಯನ್ನು ಪಡೆದ ನಂತರ ಮತ್ತಷ್ಟು ಅಲರ್ಜಿ ಸಮಸ್ಯೆ ದ್ವಿಗುಣಗೊಂಡು ಕೊಂಡಿದ್ದು, ತಲೆತಿರುಗುವಿಕೆ ಹಾಗೂ ಹೃದಯದ ಬಡಿತದಲ್ಲಿ ಏರಿಕೆ ಉಂಟಾಗಿದೆ ಎಂದು ಹೇಳಲಾಗುತ್ತದೆ.
ಬೋಸ್ಟನ್ ವೈದ್ಯಕೀಯ ಕೇಂದ್ರದ ಗೆರಿಯಾಟ್ರಿಕ್ ಆಂಕೊಲಾಜಿ ಸಹೋದ್ಯೋಗಿ ಡಾ. ಹೊಸೆನ್ ಸದರ್ಜಾಡೆ ಅವರಿಗೆ ಲಸಿಕೆ ಹಾಕಿದ ಕೂಡಲೇ ತೀವ್ರ ಪ್ರತಿಕ್ರಿಯೆ ಕಂಡುಬಂದಿದ್ದು, ತುರ್ತು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಪಿಫೈಜರ್ ಲಸಿಕೆಯನ್ನು ಪಡೆದು ಅದರ ಮೂಲಕ ಅಡ್ಡ ಪರಿಣಾಮವನ್ನು ಎದುರಿಸುತ್ತಿರುವವರ ಪ್ರಕರಣಗಳ ಮೇಲೆ ಎಫ್ ಡಿ ಎ ನಿಜ ವಹಿಸಿದೆ.