ಜಾರ್ಖಂಡ್: ಐದು ಜನ ನಕ್ಸಲರನ್ನು ಬಂದಿಸಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಜಾರ್ಖಂಡ್ ನಾ ಗುಮ್ಲಾ ಜಿಲ್ಲೆಯಲ್ಲಿ ಶನಿವಾರ ಘಟಿಸಿದೆ.
ಈ ನಕ್ಸಲರು ತ್ರತೀಯ ಪ್ರಸ್ತುತಿ ಸಮಿತಿ (ಟಿಪಿಸಿ) ಗೆ ಸೇರಿದವರು ಎಂದು ಗುರುತಿಸಲಾಗಿದ್ದು, ರೈಫಲ್ ಮತ್ತು ಪಿಸ್ತೂಲ್ ಸೇರಿದಂತೆ ಇನ್ನು ಹಲವು ಮದ್ದುಗುಂಡುಗಳು ಅವರೆ ಬಳಿ ಇದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಉಗ್ರರು ಅಕ್ರಮ ಹಣ ವರ್ಗಾವಣೆಯ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿಯ ಮೇಲೆ ಅವರನ್ನು ಬಂಧಿಸಿದ್ದು, ಕರ್ಯಾಚರಣೆ ವೇಳೆ ಮತ್ತಷ್ಟು ನಕ್ಸಲರು ತಪ್ಪಿಸಿಕೊಂಡಿದ್ದಾರೆ ಎಂಬ ಮಾಹಿತಿ ಹೊರ ಬಂದಿದೆ ಎಂದು ವರಿಷ್ಠ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.