ನವದೆಹಲಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ವಿದ್ವಾಂಸ ಸುನಿಲ್ ಕೊಠಾರಿ ಇಂದು ಹೃದಯ ಸ್ತಂಭನದಿಂದ ದೆಹಲಿ ಆಸ್ಪತ್ರೆಯಲ್ಲಿ ನಿಧನರಾದರು.
ನೃತ್ಯ ವಿಮರ್ಶಕ, ಇತಿಹಾಸಕಾರ ಕೊಠಾರಿ ಅವರು ಕಳೆದ ತಿಂಗಳಷ್ಟೇ ಅವರು ಕೊರೋನಾಗೆ ತುತ್ತಾಗಿ ಚೇತರಿಸಿಕೊಂಡರು ಎಂದು ಹೇಳಲಾಗಿದ್ದು, ಇಂದು ಮುಂಜಾನೆ ಹೃದಯಾಘಾತಕ್ಕೊಳಗಾದ ಕಾರಣದಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿಯೇ ತಮ್ಮ ಕೊನೆಯುಸಿರೆಳೆದರು.
1933 ರ ಡಿಸೆಂಬರ್ 20 ರಂದು ಜನಿಸಿದ ಇವರು ಭಾರತೀಯ ನೃತ್ಯ ಪ್ರಕಾರಗಳ ವಿಶೇಷತೆಯ ಬಗ್ಗೆ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅಷ್ಟೇ ಅಲ್ಲದೆ 1995 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2000 ಯಲ್ಲಿ ಗುಜರಾತ್ ಸಂಗೀತ ನಾಟಕ ಅಕಾಡೆಮಿ ವತಿಯಿಂದ ಗೌರವ ಪುರಸ್ಕಾರ, 2001ರಲ್ಲಿ ಪದ್ಮಶ್ರೀ ಪ್ರಶಸ್ತಿ ಅಲ್ಲದೆ ಇನ್ನು ಹಲವು ಪ್ರಶಸ್ತಿಗಳು ಇವರನ್ನು ಅರಸಿ ಬಂದಿದ್ದವು.