ನವದೆಹಲಿ: ಕಡಲ ತೀರವನ್ನು ಸ್ವಚ್ಛಗೊಳಿಸಿದ ಉಡುಪಿ ಜಿಲ್ಲೆಯ ನವದಂಪತಿಗಳ ಕೆಲಸವನ್ನು ಪ್ರಧಾನಿ ಮೋದಿ ಇಂದಿನ ಮನ್ ಕಿ ಬಾತ್ ನಲ್ಲಿ ತಿಳಿಸಿ ಅವರ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿದರು.
ಈ ವರ್ಷದ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಮಾತನಾಡುತ್ತಾ, “ಸೋಮೇಶ್ವರ ಬೀಚ್ ನಲ್ಲಿದ್ದ 800 ಕೆಜಿಗೂ ಅಧಿಕ ಕಸವನ್ನು ತೆಗೆದು ಸ್ವಚ್ಛಗೊಳಿಸಿದ ಅನುದೀಪ್ ಹಾಗೂ ವಿನುಷ ಜೋಡಿಯನ್ನು ಶ್ಲಾಘಿಸುತ್ತೇನೆ” ಎಂದು ತಿಳಿಸಿದರು.
ನವೆಂಬರ್ 27ರಂದು ಸೋಮೇಶ್ವರ ಕಡಲ ತೀರದಲ್ಲಿ ಸ್ವಚ್ಛಗೊಳಿಸುವ ಮೂಲಕ ತಮ್ಮ ಪರಿಸರಪ್ರೇಮವನ್ನು ತೋರಿಸಿಕೊಂಡಿದ್ದಾರೆ ಬೈಂದೂರು ಮೂಲದ ನವ ಜೋಡಿಗಳು ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದರು. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಟ್ವೀಟ್ ಮಾಡಿ ಅಭಿನಂದನೆ ತಿಳಿಸಿದ್ದಾರೆ.