ಸೂರ್ಯ ಮತ್ತು ಚಂದ್ರ ಗ್ರಹಣಗಳು ನೈಸರ್ಗಿಕ ವಿದ್ಯಮಾನಗಳಾಗಿವೆ. ಅವು ವರ್ಷದಲ್ಲಿ ಕನಿಷ್ಠ ಎರಡು ಬಾರಿ ಸಂಭವಿಸುತ್ತದೆ. 2021 ರಲ್ಲಿ ಭಾರತದಲ್ಲಿ ಒಟ್ಟು ಎರಡು ಚಂದ್ರ ಮತ್ತು ಎರಡು ಸೂರ್ಯಗ್ರಹಣಗಳು ಗೋಚರಿಸಲಿವೆ. ಈ ಗ್ರಹಣಗಳು ದೇಶದ ವಿವಿಧ ಭಾಗಗಳಲ್ಲಿ ಕಂಡುಬರಲಿದೆ. 2021 ರಲ್ಲಿ ಭಾರತದಲ್ಲಿ ಚಂದ್ರ ಮತ್ತು ಸೂರ್ಯಗ್ರಹಣಗಳ ದಿನಾಂಕ, ಸಮಯ ಮತ್ತು ಗೋಚರತೆಯ ವಿವರಗಳನ್ನು ನೋಡುವುದಾದರೆ…
2021ರಲ್ಲಿ ಚಂದ್ರ ಗ್ರಹಣಗಳು
ಮೇ 26: ಖಗೋಳಶಾಸ್ತ್ರಜ್ಞರ ಪ್ರಕಾರ 2021ರ ಮೊದಲ ಚಂದ್ರ ಗ್ರಹಣವು ಮೇ 26 ರಂದು ಸಂಭವಿಸಲಿದ್ದು ಇದು ಪೂರ್ಣ ಚಂದ್ರ ಗ್ರಹಣವಾಗಿರುತ್ತದೆ. ಈ ಚಂದ್ರ ಗ್ರಹಣ ದಕ್ಷಿಣ ಏಷ್ಯಾ, ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಸಾಗರ, ಹಿಂದೂ ಮಹಾಸಾಗರ ಮತ್ತು ಅಂಟಾರ್ಕ್ ಟಿಕ ದಲ್ಲಿ ಗೋಚರಿಸುತ್ತದೆ. ಭಾರತದಲ್ಲಿ ಈ ಗ್ರಹಣ ಮಧ್ಯಾಹ್ನ 2:17 ಕ್ಕೆ ಪ್ರಾರಂಭವಾಗಿ ಸಂಜೆ 7:19 ಕ್ಕೆ ಕೊನೆಗೊಳ್ಳುತ್ತದೆ.
ನವೆಂಬರ್ 18-19: 2021 ರ ಎರಡನೇ ಚಂದ್ರ ಗ್ರಹಣ ಭಾಗಶಃ ಚಂದ್ರ ಗ್ರಹಣವಾಗಿರುತ್ತದೆ. ಇದು ಯುರೋಪಿನ ಹೆಚ್ಚಿನ ಭಾಗಗಳಲ್ಲಿ, ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಆಫ್ರಿಕಾ, ಪಶ್ಚಿಮ ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕಾ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಸಾಗರ, ಹಿಂದೂ ಮಹಾಸಾಗರ ಮತ್ತು ಆರ್ಕ್ಟಿಕ್ನಲ್ಲಿ ಗೋಚರಿಸುತ್ತದೆ.
ಭಾರತದಲ್ಲಿ ಈ ಗ್ರಹಣ ಬೆಳಿಗ್ಗೆ 11:32 ಕ್ಕೆ ಪ್ರಾರಂಭವಾಗಿ ಸಂಜೆ 6:33 ಕ್ಕೆ ಕೊನೆಗೊಳ್ಳುತ್ತದೆ.
ಸೂರ್ಯ ಗ್ರಹಣ:
ಜೂನ್ 10: 2021 ರ ಮೊದಲ ಸೂರ್ಯಗ್ರಹಣವು ಜೂನ್ 10 ರಂದು ನಡೆಯಲಿದೆ. ಈ ಸೂರ್ಯಗ್ರಹಣವನ್ನು ಯುರೋಪಿನ ಬಹುಭಾಗ, ಏಷ್ಯಾ, ಉತ್ತರ ಆಫ್ರಿಕಾ, ಪಶ್ಚಿಮ ಆಫ್ರಿಕಾ, ಉತ್ತರ ಅಮೆರಿಕದ ಹೆಚ್ಚಿನ ಭಾಗ, ಅಟ್ಲಾಂಟಿಕ್ ಮತ್ತು ಆರ್ಕ್ಟಿಕ್ ಪ್ರದೇಶಗಳಿಂದ ವೀಕ್ಷಿಸಬಹುದು.
ಭಾರತದಲ್ಲಿ, ಇದು ಮಧ್ಯಾಹ್ನ 1:42 ರ ಸುಮಾರಿಗೆ ಪ್ರಾರಂಭವಾಗುತ್ತದೆ ಮತ್ತು ಸಂಜೆ 6:41 ಕ್ಕೆ ಮುಕ್ತಾಯಗೊಳ್ಳುತ್ತದೆ.
ಡಿಸೆಂಬರ್ 4 ರಂದು 2021 ರ ಕೊನೆಯ ಸೂರ್ಯಗ್ರಹಣವಾಗಿರುತ್ತದೆ. ಆಸ್ಟ್ರೇಲಿಯಾದ ದಕ್ಷಿಣದಲ್ಲಿ, ದಕ್ಷಿಣ ಆಫ್ರಿಕಾದಲ್ಲಿ ದಕ್ಷಿಣದಲ್ಲಿ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಮಹಾಸಾಗರ, ಹಿಂದೂ ಮಹಾಸಾಗರ ಮತ್ತು ಅಂಟಾರ್ಕ್ಟಿಕಾದಲ್ಲಿ ಸೂರ್ಯಗ್ರಹಣ ಗೋಚರಿಸುತ್ತದೆ.
2020 ರ ಕೊನೆಯ ಸೂರ್ಯಗ್ರಹಣ ಡಿಸೆಂಬರ್ 14ರ ಸೋಮವಾರ ಸಂಭವಿಸಿದೆ. ಕೊನೆಯ ಸೂರ್ಯಗ್ರಹಣ 2020 ಭಾರತದಲ್ಲಿ ಬೆಳಗ್ಗೆ 07:03 ಕ್ಕೆ ಪ್ರಾರಂಭವಾಯಿತು ಮತ್ತು ಮಧ್ಯಾಹ್ನ 12:23 ಕ್ಕೆ ಕೊನೆಗೊಳ್ಳುತ್ತದೆ.
ಸೂರ್ಯಗ್ರಹಣವು ನಮ್ಮ ಸೂರ್ಯನ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಸಾಮಾನ್ಯ ನಂಬಿಕೆ ಇದೆ. ಆದ್ದರಿಂದ ಜ್ಯೋತಿಷಿಗಳು ಸೂರ್ಯ ಗ್ರಹಣವು ನಮ್ಮ ಜೀವನದ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ.