ನವದೆಹಲಿ: ದೇಶದ ಮೊದಲ ಚಾಲಕರಹಿತ ಹಾಗೂ ಸಂಪೂರ್ಣ ಸ್ವಯಂಚಾಲಿತ ಮೆಟ್ರೋ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.
ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ದೆಹಲಿ ಮೆಟ್ರೋದ 37 ಕಿಲೋಮೀಟರ್ ಉದ್ದದ ಮೆಜೆಂಟಾ ಲೈನ್ ಅಂದರೆ ಜನಕಪುರಿ ವೆಸ್ಟ್ ಇಂದ ಬಟಾನಿಕಲ್ ಗಾರ್ಡನ್ ವರೆಗೆ ದೇಶದ ಮೊದಲ ಸಂಪೂರ್ಣ ಸ್ವಯಂಚಾಲಿತ ರೈಲಿನ ಸೇವೆಗೆ ಚಾಲನೆ ನೀಡಿ ಶುಭ ಹಾರೈಸಿದರು.