ನವದೆಹಲಿ: ಭಾರತದ ವಿವಿಧ ಭಾಗಗಳಲ್ಲಿ ಎನ್440ಕೆ ಹೆಸರಿನ COVID-19 ನ ಮತ್ತೊಂದು ರೂಪಾಂತರವನ್ನು ಪತ್ತೆ ಹಚ್ಚಲಾಗಿದೆ ಎನ್ನಲಾಗಿದೆ. ಭಾರತದಲ್ಲಿ ಕಂಡುಹಿಡಿಯುವ ಮುನ್ನ, ಕೆಲ ದಿನಗಳ ಹಿಂದೆಯಷ್ಟೇ ಯುನೈಟೆಡ್ ಕಿಂಗ್ಡಮ್ ನಲ್ಲಿ ಮೂಲ ವೈರಸ್ ಗಿಂತ ಶೇ. 70 ಹೆಚ್ಚಿನ ವೇಗದಲ್ಲಿ ಹರಡುವ ಸಾಮರ್ಥ್ಯವನ್ನು ಹೊಂದಿರುವ ರೂಪಾಂತರ ಹೊಂದಿರುವ ಹೊಸ ಕೊರೊನಾವೈರಸ್ ತಳಿ ಪತ್ತೆಯಾಗಿತ್ತು.
ಇದೀಗ ಭಾರತೀಯ ಸಂಶೋಧಕರ ಪ್ರಕಾರ ದೇಶದಲ್ಲಿ ಹರಡಿರುವ ಕೊರೊನಾವೈರಸ್ ರೂಪಾಂತರಗಳನ್ನು ಪತ್ತೆಯಾದ್ದು, ಅವುಗಳಲ್ಲಿ N440K ಎಂಬ ರೂಪಾಂತರವು ಆಂಧ್ರಪ್ರದೇಶದಲ್ಲಿ ವಿಶ್ಲೇಷಿಸಲ್ಪಟ್ಟ 272 ಕೊರೋನವೈರಸ್ ಗಳ ಪೈಕಿ ಶೇ. 34 ರಷ್ಟು ಹೋಲುತ್ತದೆ ಎನ್ನಲಾಗಿದೆ.
ಇನ್ನು ಈ ಕುರಿತಾದ ಅಧ್ಯಯನದಲ್ಲಿ ಭಾಗವಹಿಸಿದ ಸಂಶೋಧಕರು 6,370 ಭಾರತೀಯ ಕೊರೊನಾವೈರಸ್ ಜೀನೋಮ್ಗಳನ್ನು ವಿಶ್ಲೇಷಿಸಿದ್ದಾರೆ ಮತ್ತು ದೇಶದಲ್ಲಿ ಎರಡು ಜೀನೋಮ್ N440K ರೂಪಾಂತರವನ್ನು ಹೊಂದಿದೆ ಎಂದು ಕಂಡುಹಿಡಿದಿದೆ. ಸಂಶೋಧಕರ ಪ್ರಕಾರ, N440K ರೂಪಾಂತರವು ಜುಲೈನಲ್ಲಿ ಏಷ್ಯಾದಲ್ಲಿ ಕಂಡು ಬಂದಿದ್ದು. ಆದಾಗ್ಯೂ, ಈ ರೂಪಾಂತರಿತ ವೈರಸ್ನ ನಿಖರವಾದ ಮೂಲದ ಬಗ್ಗೆ ಸಂಶೋಧಕರು ಇನ್ನೂ ಸ್ಪಷ್ಟವಾಗಿಲ್ಲ.
ಭಾರತದ ಹಲವೆಡೆ ಈ ಹೊಸ ರೂಪಾಂತರದ ಕೊರೊನಾವೈರಸ್ ಪತ್ತೆಯಾಗಿದೆ. ಆದರೆ ಕೋವಿಡ್-19 ಅಂದರೆ ಹಳೆ ಕೊರೊನಾ ವೈರಸ್ ಕೇರಳ ರಾಜ್ಯವನ್ನು ಹೊರತುಪಡಿಸಿ, ಭಾರತದ ಬಹುತೇಕ ಪ್ರದೇಶಗಳಲ್ಲಿ ಪಾಸಿಟಿವ್ ಪ್ರಕರಣಗಳ ನಿರಂತರ ಇಳಿಕೆಯನ್ನು ಪ್ರಾರಂಭಿಸಿವೆ. ಆದರೂ ಈಗ ಹೊಸ ಮಾದರಿಯ ಕರೋನ ವೈರಸ್ ಆವಿಷ್ಕಾರದಿಂದ ದೇಶದ ವೈದ್ಯಕೀಯ ತಜ್ಞರು ಮತ್ತೆ ತಲೆಕೆಡಿಸಿಕೊಳ್ಳುವ ಆಗಿದೆ. ಇದು ಅಷ್ಟೇ ಅಲ್ಲದೆ ಜನರಲ್ಲಿ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.