ಜಗ್ರೇಬ್: ಕ್ರೋವೇಶಿಯಾದಲ್ಲಿ ಪ್ರಬಲ ಭೂಕಂಪದಿಂದಾಗಿ ಏಳು ಮಂದಿ ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ರಿಕ್ಟರ್ ಮಾಪನದಲ್ಲಿ 6.4ರಷ್ಟು ತೀವ್ರತೆಯಿದ್ದ ಭೂಕಂಪವು ಕಾಣಿಸಿಕೊಂಡಿದ್ದು, ಹಲವಾರು ಕಟ್ಟಡಗಳು ನೆಲಕ್ಕುರುಳಿದೆ.
ನಿನ್ನೆ ಕೂಡ ಇಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕಂಪ ಸಂಭವಿಸಿತ್ತು. ಆದರೆ ಇಂದು ಜೋರಾಗಿ ಭೂಕಂಪ ಉಂಟಾಗಿದೆ. ಸಾವಿನ ಸಂಖ್ಯೆಯು ಹೆಚ್ಚಬಹುದು ಎಂದು ವರದಿಗಳು ತಿಳಿಸಿವೆ.