ಅಹಮದಾಬಾದ್: ಗುಜರಾತ್ ನಾ ಕಚ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದ ಪ್ರಕಾರ 4.3 ರಷ್ಟು ತೀವ್ರತೆಯ ಪ್ರಮಾಣ ಇತ್ತು ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ ಸರಿ ಸುಮಾರು 9.45ಕ್ಕೆ ಸರಿಯಾಗಿ ಭೂಕಂಪನ ಸಂಭವಿಸಿದ್ದು, ಕಚ್ ನಾ ಖಾವ್ಡಾ ಗ್ರಾಮದ ಬಳಿ 26 ಕಿಲೋಮೀಟರ್ ಆಳದಲ್ಲಿ ಈ ಭೂಕಂಪದ ಕೇಂದ್ರಬಿಂದು ವನ್ನು ಗುರುತಿಸಲಾಗಿದೆ ಎಂದು ಸಂಶೋಧನಾ ಸಂಸ್ಥೆಗಳು ತಿಳಿಸಿದೆ.
ಈ ಹಿಂದೆಯೂ ಕಚ್ ನ ಬಚಾವ್ ಪಟ್ಟಣದ ಬಳಿ 2.2 ರಷ್ಟು ತೀವ್ರ ಭೂಕಂಪ ಕಂಡುಬಂದಿದ್ದು ಇದೀಗ ಮರುಕಳಿಸಿದಂತಾಗಿ ಇದೆ ಎಂದು ಹೇಳಲಾಗಿದೆ. ಇಂದಿನ ಭೂಕಂಪದಿಂದ ಯಾವುದೇ ರೀತಿಯ ಪ್ರಾಣ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.