ಮೆಸೇಜ್ ಗಳ ಮೂಲಕ ಸಂದೇಶವನ್ನು ರವಾನಿಸಿ ಜನರನ್ನು ಹಾದಿ ತಪ್ಪಿಸುವ ಅಂತಹ ಹಲವಾರು ಸ್ಕ್ಯಾಮ್ ಗಳ ಬಗ್ಗೆ ಅದಷ್ಟೇ ಕೇಳಿದರೂ ಮತ್ತೆ ಅದೇ ರೀತಿಯ ವಂಚನೆಗಳಿಗೆ ಜನರು ಒಳಗಾಗುತ್ತಿದ್ದಾರೆ. ಹೌದು, ಸರ್ಕಾರ ದೇಶದಲ್ಲಿನ ವಿದ್ಯಾರ್ಥಿಗಳಿಗಾಗಿ ಉಚಿತ ಲ್ಯಾಪ್ಟಾಪ್ ವಿತರಿಸುತ್ತಿ. ಹಾಗೂ ಅದನ್ನು ಪಡೆಯಲು ಈ ಲಿಂಕ್ ಗೆ ನಮೂದಿಸಿ ಕೊಳ್ಳಿ ಎಂಬ ಸಂದೇಶವನ್ನು ರವಾನಿಸುವ ಒಂದು ಮೆಸೇಜ್ ಎಲ್ಲೆಡೆ ಹರಿದಾಡುತ್ತಿದ್ದು, ಹಲವಾರು ಮಂದಿ ಇದಕ್ಕೆ ನಮೂದಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ.
“Government giving free Laptop
to all the students of India.
Register your Number on
Gov-Laptop app to get
free laptop.
Link: http://tiny.cc/Register-Laptop”
ಆದರೆ ಈ ಲಿಂಕ್ ಗೆ ಕ್ಲಿಕ್ ಮಾಡಿದ ತಕ್ಷಣ ಅದರಲ್ಲಿ ಅವರ ಮೊಬೈಲ್ ಸಂಖ್ಯೆಯನ್ನು ನಮೂದಿಸುವಂತೆ ಕೇಳುತ್ತದೆ. ಹಾಗೂ ಒಂದು ಆಪ್ ಡೌನ್ಲೋಡ್ ಆಗುತ್ತದೆ. ಏನಾಯಿತು ಏನಾಗಿಲ್ಲ ಎಂದು ಯೋಚಿಸುವ ಮುನ್ನವೇ, ನಮೂದಿಸಿದವರ ಮೊಬೈಲ್ ನಂಬರ್ ಇಂದ ಅವರ ಬಳಿ ಇರುವ ಇತರೆ ಕರೆ ಪಟ್ಟಿಗೂ ಯಾವುದೇ ಸೂಚನೆ ಇಲ್ಲದೆ ರವಾನೆಯಾಗುತ್ತದೆ. ಈ ಸಂದೇಶ ಹೀಗೆ ಒಬ್ಬರಿಂದೊಬ್ಬರಿಗೆ ಹರಡುತ್ತಿದ್ದು, ಅವರಿಗೆ ತಿಳಿಯದಂತೆ ಅವರ ಪರಿಚಿತರಿಗೆ ಅವರ ಮೂಲಕವೇ ಕಳಿಸಲಾಗುತ್ತದೆ.
ಆದರೆ ಈ ರೀತಿ ಕಳಿಸಲ್ಪಟ್ಟ ಮೆಸೇಜ್ ಮತ್ತು ಲಿಂಕ್ ನಲ್ಲಿ ನಮೂದಿಸುವ ಮೂಲಕ ಯಾವುದೇ ಲ್ಯಾಪ್ಟಾಪ್ ಗಳನ್ನು ನೀಡುವುದಾಗಿ ಸರ್ಕಾರ ಎಲ್ಲಿಯೂ ತಿಳಿಸಿಲ್ಲ. ಆದ್ದರಿಂದ ಈ ರೀತಿಯ ಸಂದೇಶಗಳನ್ನು ತೆರೆದು ನೋಡುವ ಅಥವಾ ರಿಜಿಸ್ಟರ್ ಮಾಡುವ ಮುನ್ನ ಒಮ್ಮೆ ಯೋಚಿಸುವುದು ಇಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ.