ಇಂಧೋರ್: ಬೆಂಗಳೂರಿಗೆ ಚಿಕಿತ್ಸೆಗೆಂದು ಹೊರಟಿದ್ದ ಮಗು ವಿಮಾನದಲ್ಲೇ ತೀವ್ರ ಅಸ್ವಸ್ಥತೆಗೆ ಒಳಗಾಗಿ ಮೃತಪಟ್ಟಿರುವ ಘಟನೆಯು ಇಂಧೋರ್ ನಲ್ಲಿ ನಡೆದಿದೆ.
ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನವನ್ನು ಇಂಧೋರ್ ನಲ್ಲಿ ತುರ್ತು ಭೂ ಸ್ಪರ್ಶ ಮಾಡಿ ಮಗುವಿನ ಪ್ರಾಣ ರಕ್ಷಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.
ದೇವ್ ಜೈಶ್ವಾಲ್ ಎಂಬ ಏಳು ತಿಂಗಳ ಮಗು ಚಿಕಿತ್ಸೆಗಾಗಿ ಬೆಂಗಳೂರಿಗೆ ಇಂಡಿಗೊ6ಇ-2248ನಲ್ಲಿ ಪ್ರಯಾಣಿಸಿತ್ತು. ಆದರೆ ಹೈಡ್ರೋಸೆಫಾಲಸ್ ಸಮಸ್ಯೆಯಿದ್ದ ಮಗುವಿಗೆ ಈಗಾಗಲೇ ಒಂದು ಶಸ್ತ್ರಚಿಕಿತ್ಸೆ ಆಗಿದ್ದು, ವಿಮಾನದಲ್ಲಿ ಮಗುವಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.
ವಿಮಾನ ಸಿಬ್ಬಂದಿಯು ಇಂಧೋರ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿ ಖಾಸಗಿ ಆಸ್ಪತ್ರೆಗೆ ಮಗುವನ್ನು ದಾಖಲಿಸಿದರೂ ಮಗುವಿನ ಪ್ರಾಣ ರಕ್ಷಿಸಲು ಸಾಧ್ಯವಾಗಲಿಲ್ಲ.