ಮೆಕ್ಸಿಕೋ: ಅಕ್ರಮ ಸಂಬಂಧಕ್ಕಾಗಿ ರಹಸ್ಯ ಸುರಂಗ ನಿರ್ಮಿಸಿ ಆಕೆಯ ಮನೆಗೆ ತೆರಳುತಿದ್ದ ವ್ಯಕ್ತಿಯ ಆಟ ಆಕೆಯ ಪತಿಯ ಮುಂದೆ ಬಯಲಾದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.
ವಿವಾಹಿತ ಮಹಿಳೆಯೊಂದಿಗೆ ಸಂಬಂಧವಿರಿಸಿಕೊಂಡಿದ್ದ ವ್ಯಕ್ತಿ, ಮಹಿಳೆಯ ಪತಿ ಕೆಲಸಕ್ಕೆ ತೆರಳಿದ ಸಮಯದಲ್ಲಿ ಈತ ತನ್ನ ಮನೆಯಿಂದ ಆಕೆಯ ಮನೆಗೆ ಉದ್ದದ ಸುರಂಗ ಕೊರೆಯುವ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ಮಹಿಳೆಯ ಪತಿ ಜಾರ್ಜ್ ಕೆಲಸಕ್ಕೆ ತೆರಳಿದ ನಂತರ, ಇವರು ಸುರಂಗದ ಮೂಲಕ ಸಂಪರ್ಕಿಸುತ್ತಿದ್ದರು. ಒಂದು ದಿನ ಜಾರ್ಜ್ ನಿಗದಿತ ಸಮಯಕ್ಕಿಂತ ವೇಗವಾಗಿ ಮನೆಗೆ ಬಂದಿದ್ದರಿಂದ ಪತ್ನಿಯ ಕಳ್ಳಾಟ ಬೆಳಕಿಗೆ ಬಂದಿದೆ.
ವಿಚಾರ ತಿಳದ ನಂತರ ಜಾರ್ಜ್, ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆಲ್ಬರ್ಟೋನನ್ನು ಹಿಂಬಾಲಿಸಿ ಆತನ ಮನೆಯ ಸಮೀಪದಲ್ಲೇ ಇದ್ದ ಸುರಂಗ ಮಾರ್ಗದ ಬಗ್ಗೆ ಪರಿಶೀಲಿಸಿದ ನಂತರ ಸುರಂಗದ ವಿಷಯ ಬಯಲಾಗಿದೆ. ಇದೀಗ ಆ ಫೋಟೋ ಎಲ್ಲೆಡೆ ವೈರಲ್ ಆಗಿದೆ.