ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ) 10ನೇ ತರಗತಿ ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಲಾಗಿದ್ದು, ಮೇ 4ರಿಂದ ಆರಂಭವಾಗಿ ಜೂನ್ 10ಕ್ಕೆ ಬೋರ್ಡ್ ಪರೀಕ್ಷೆ ಮುಕ್ತಾಯವಾಗಲಿದೆ ಎಂದು ರಾಷ್ಟ್ರ ಪ್ರೌಢಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಗುರುವಾರ ತಿಳಿಸಿದರು.
ಸಿಬಿಎಸ್ ಇ 10ನೇ ತರಗತಿ ಮತ್ತು 12ನೇ ತರಗತಿ ಬೋರ್ಡ್ದೇ ದೇಶದಲ್ಲಿ ಕೊರೊನಾ ವೈರಸ್ ಸ್ಫೋಟವಾದ ಹಿನ್ನೆಲೆಯಲ್ಲಿ, ಶಿಕ್ಷಣ ಸಚಿವಾಲಯ ಈ ಹಿಂದೆ ಸಿಬಿಎಸ್ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿತ್ತು. ಅಂತೆಯೇ ಡಿಸೆಂಬರ್ 31ರಂದು ಪರೀಕ್ಷೆಯ ದಿನಾಂಕವನ್ನು ಘೋಷಿಸುವುದ್ದಾಗಿಯೂ ತಿಳಿಸಿದರು. ಅದರಂತೆ ಇಂದು ಪರೀಕ್ಷೆಯ ಬಗ್ಗೆ ಹೇಳಿದ್ದು, ಪರೀಕ್ಷೆಯ ನಂತರ ಜುಲೈ 15ರೊಳಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದರು.