ಸಿಯೊಲ್: ಉತ್ತರ ಕೊರೊಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತನ್ನ ದೇಶದ ಜನತೆಗೆ ಪತ್ರದ ಮೂಲಕ ಹೊಸ ವರ್ಷದ ಶುಭಾಶಯ ಕೋರಿರುವರು.
ಕೋವಿಡ್ ಸಮಯದಲ್ಲಿ ನೀಡಿರುವ ಬೆಂಬಲಕ್ಕೆ ಧನ್ಯವಾದ ಸಲ್ಲಿಸಿರುವ ಕಿಮ್ ಜಾಂಗ್ ಉನ್, ಜನತೆಯ ಧ್ಯೇಯ ಹಾಗೂ ಆಕಾಂಕ್ಷೆಗಳನ್ನು ಈಡೇರಿಸುವ ನವಯುಗ ರೂಪಿಸಲು ಶ್ರಮಿಸುತ್ತೇನೆ ಎಂದು ಹೇಳಿರುವರು.
ವರ್ಷದ ಮೊದಲ ದಿನ ಟಿವಿ ಮೂಲಕ ಸಂದೇಶ ನೀಡುತ್ತಿದ್ದ ಕಿಮ್ ಜಾಂಗ್ ಉನ್ ಅವರು ಈ ಸಲ ಪತ್ರದ ಮೂಲಕ ಶುಭಾಶಯ ಕೋರಿರುವರು.