News Kannada
Saturday, January 28 2023

ದೇಶ-ವಿದೇಶ

ಕೋರೋನ ನಿರ್ವಹಣೆ; 13 ದೇಶಗಳ ನಾಯಕರ ಪೈಕಿ ಅಗ್ರಸ್ಥಾನ ಪಡೆದ ಮೋದಿ

Photo Credit :

ಕೋರೋನ ನಿರ್ವಹಣೆ; 13 ದೇಶಗಳ ನಾಯಕರ ಪೈಕಿ ಅಗ್ರಸ್ಥಾನ ಪಡೆದ ಮೋದಿ

ನವದೆಹಲಿ: ಮಾರಕ ಕರೊನಾ ವೈರಸ್ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸಿದ ಬಗ್ಗೆ 13 ದೇಶಗಳಲ್ಲಿ ಅಮೆರಿಕದ ‘ಮಾರ್ನಿಂಗ್ ಕನ್ಸಲ್ಟ್’ ಎಂಬ ಸಂಸ್ಥೆ ಸಮೀಕ್ಷೆ ನಡೆಸಲಾಗಿದೆ. ಆ ಸಮೀಕ್ಷೆ ಪ್ರಕಾರ ಪ್ರಧಾನಿ ಮೋದಿ ಅವರು ಅಗ್ರಸ್ಥಾನದಲ್ಲಿ ಇದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಇದೇ ಸಂಸ್ಥೆ ಕಳೆದ ಏಪ್ರಿಲ್​ನಲ್ಲಿ 10 ದೇಶಗಳಲ್ಲಿ ಸಮೀಕ್ಷೆ ನಡೆಸಿತ್ತು. ಆ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ 10 ನಾಯಕರ ಪಟ್ಟಿಯಲ್ಲಿ ಪ್ರಥಮಸ್ಥಾನ ಪಡೆದಿದ್ದರು. ಇದೀಗ ಮತ್ತೆ ಡಿಸೆಂಬರ್​ 22ರವರೆಗಿನ ಅಂಕಿಅಂಶಗಳನ್ನು ಗಣನೆಗೆ ತೆಗೆದುಕೊಂಡು ಇದೇ ಸಂಸ್ಥೆ 13 ದೇಶಗಳ ಸಮೀಕ್ಷೆ ನಡೆಸಿದೆ. ಹಾಗೂ ಇದರಲ್ಲಿಯೂ ಮೋದಿ ಪುನಃ ಪ್ರಥಮ ಸ್ಥಾನ ಪಡೆದು ವಿಶ್ವದ ಅತ್ಯುತ್ತಮ ನಾಯಕ ಎಂದು ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಬಾರಿ 10 ದೇಶಗಳ ಸಮೀಕ್ಷೆ ನಡೆದಾಗ ಮೋದಿ ಅವರಿಗೆ 68 ಅಂಕಗಳು ಲಭಿಸಿತ್ತು. ಇದೀಗ 13 ದೇಶಗಳ ನಡುವೆ ನಡೆದ ಸಮೀಕ್ಷೆಯಲ್ಲಿ 55 ಅಂಕಗಳು ಲಭಿಸಿವೆ. ಆದರೂ ಇತರ ದೇಶಗಳಿಗೆ ಹೋಲಿಸಿದಾಗ ಪ್ರಧಾನಿ ಮೋದಿ ಅವರಿಗೆ ಸಿಕ್ಕ ಅಂಕಗಳು ಹೆಚ್ಚಿದೆ ಎಂದು ಸಂಸ್ಥೆ ಹೇಳಿದೆ. ಅಂದರೆ ಏಪ್ರಿಲ್​ನಲ್ಲಿ ಇವರಿಗೆ 68 ಅಂಕಗಳು ಲಭಿಸಿದ್ದವು.

ಮೆಕ್ಸಿಕೋ ಅಧ್ಯಕ್ಷ ಆಯಂಡ್ರೆಸ್‌ ಮ್ಯಾನ್ಯುಯೆಲ್‌ ಲೋಪೆಜ್‌ 29 ಅಂಕಗಳನ್ನು ಗಳಿಸಿದ್ದಾರೆ ಹಾಗೂ ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ಗೆ 27 ಅಂಕಗಳು ಬಂದಿದ್ದು, ಮೋದಿ ನಂತರದ ಸ್ಥಾನ ಪಡೆದುಕೊಂಡಿದ್ದಾರೆ.

ಇಷ್ಟೇ ಅಲ್ಲದೆ ಈ ಸಮೀಕ್ಷೆಯಲ್ಲಿ ಒಳಗೊಂಡಂತ ಇತರೆ ರಾಷ್ಟ್ರಗಳಾದ ಆಸ್ಪ್ರೇಲಿಯಾ, ಬ್ರೆಜಿಲ್‌, ಕೆನಡಾ, ಫ್ರಾನ್ಸ್‌, ಜರ್ಮನಿ, ಭಾರತ, ಇಟಲಿ, ಜಪಾನ್‌, ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್‌, ಬ್ರಿಟನ್‌, ಅಮೆರಿಕ ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ. ಇದರ ಮೂಲಕ ಜನಸಂಖ್ಯೆಯ ಆಧಾರದ ಮೇಲೆ ಕರೊನಾ ವೈರಸ್​ ಬಿಕ್ಕಟ್ಟು ಸಮರ್ಥವಾಗಿ ನಿಭಾಯಿಸಿರುವ ನಾಯಕ ಇವರು ಎನಿಸಿಕೊಂಡಿದ್ದಾರೆ.

See also  ನಾನು ಜಯಲಲಿತಾ ಮಗ, ಆಸ್ತಿಯೆಲ್ಲಾ ನನಗೆ ಸೇರಿದ್ದು: ಜಯಾ ಮಗ ಎಂದು ಮುಂದೆ ಬಂದ ವ್ಯಕ್ತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು