ಚೆನ್ನೈ : ಭಾರತದ 67 ನೇ ಚೆಸ್ ಗ್ರಾಂಡ್ ಮಾಸ್ಟರ್’ಆಗಿ ಹೊಸ ದಾಖಲೆ ಬರೆದಿದ ಗೋವಾದ 14 ವರ್ಷದ ಲಿಯಾನ್ ಮೆಂಡೊಂಕಾ ಎನ್ನುವ ಬಾಲಕ. ಆತನ ಸಾಧನೆಗೆ ಟ್ವೀಟ್ ಮೂಲಕ ಅಭಿನಂದಿಸಿದ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್.
ಇಟಲಿಯಲ್ಲಿ ನಡೆದ ವೆಗಾನ್ ಕಪ್ನಲ್ಲಿ ಎರಡನೇ ಸ್ಥಾನ ಹೊಂದಿದ ಲಿಯಾನ್ ಮೂರನೇ ಹಾಗೂ ಫೈನಲ್ ನಾರ್ಮ್ ಪಡೆದುಕೊಂಡಿದ್ದಾರೆ. ಈ ಮೂಲಕ ಹೊಸ ದಾಖಲೆಯನ್ನು ಬರೆದಿರುವ ಲಿಯಾನ್, ಲಾಕ್ ಡೌನ್ ನಲ್ಲಿ ಯುರೋಪ್ ನಲ್ಲಿ ಇದ್ದ ಲಿಯಾನ್ ಚೆಸ್ ನಲ್ಲಿ ಪರಿಣಿತಿ ಪಡೆಯುವ ಪ್ರಯತ್ನ ಮಾಡಿದ್ದಾರೆ . ಮಾರ್ಚ್ ನಿಂದ ಡಿಸೆಂಬರ್ ವರೆಗೆ 16 ಟೂರ್ನ್’ಮೆಂಟ್’ಗಳಲ್ಲಿ ಭಾಗವಹಿಸಿ ಇಎಲ್ಒ ರೇಟಿಂಗ್ ಪಾಯಿಂಟ್ ಅನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ 2432 ನಿಂದ 2544ಪಾಯಿಂಟ್ ಗಳಷ್ಟು ರೇಟಿಂಗ್ ನನ್ನು ಹೆಚ್ಚಿಸಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ.