News Kannada
Wednesday, February 08 2023

ದೇಶ-ವಿದೇಶ

ಕೋವಿಡ್ ಲಸಿಕೆಗೆ ಅಂತಿಮ ಅನುಮೋದನೆ

Photo Credit :

ಕೋವಿಡ್ ಲಸಿಕೆಗೆ ಅಂತಿಮ ಅನುಮೋದನೆ

ನವದೆಹಲಿ : ಡಿಸಿಜಿಐ ಅಂತಿಮವಾಗಿ ಲಸಿಕೆ ಬಳಕೆ ಮಾಡೋದಕ್ಕೆ ಅನುಮೋದನೆ ನೀಡಿದರೆ, ದೇಶದಲ್ಲಿ ಕೋವಿಶೀಲ್ಡ್ ಲಸಿಕೆಯ ಬಳಕೆಗೆ ಅಂತಿಮವಾಗಿ ಅನುಮತಿ ಸಿಕ್ಕಂತೆ ಆಗುತ್ತದೆ.

ಆಸ್ಟ್ರಾಜೆನೆಕಾ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯವು ತುರ್ತು ಬಳಕೆಗಾಗಿ ಅಭಿವೃದ್ಧಿಪಡಿಸಿದ ಕೊರೊನಾವೈರಸ್ ಲಸಿಕೆಯನ್ನು ಭಾರತದ ಔಷಧ ನಿಯಂತ್ರಕ ಸಂಸ್ಥೆಯ ತಜ್ಞರ ಸಮಿತಿಯು, ಡಿಸಿಜಿಐಗೆ ಶಿಫಾರಸ್ಸು ಮಾಡಿದೆ. ಇದೀಗ ಡಿಸಿಜಿಐಯ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿದ್ದು, ಕೊನೆಯ ನಿರ್ಧಾರ ಸಿಕ್ಕಕೂಡಲೇ ಕೋವಿಶೀಲ್ಡ್ ಎಲ್ಲೆಡೆ ವಿತರಣೆ ಆಗುವುದಕ್ಕೆ ಸಿದ್ದತೆಗೊಂಡಿದೆ.

ಲಸಿಕೆ ಯ ಪ್ರಸ್ತಾವನೆಗಳಿಗಾಗಿ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ವಿ.ಜಿ.ಸೋಮಾನಿ ಅವರು ರಚಿಸಿದ ತಜ್ಞರ ಸಮಿತಿಯು ಈ ವಾರ ಎರಡನೇ ಬಾರಿಗೆ ಸಭೆಯನ್ನು ನಡೆಸಿದರು. ಇಂತಹ ಸಭೆಯಲ್ಲಿ ಆಕ್ಸ್ ಫರ್ಡ್-ಆಸ್ಟ್ರಾಜೆನೆಕಾ ಕೋವಿಡ್-19 ಲಸಿಕೆಗೆ ತುರ್ತು ಅನುಮೋದನೆಯನ್ನು ಶಿಫಾರಸ್ಸು ಮಾಡಿದೆ.

ಭಾರತದಲ್ಲಿ ಕೋವಿಶೀಲ್ಡ್ ಎಂದು ಹೆಸರಿಸಿದ ಆಕ್ಸ್ ಫರ್ಡ್-ಆಸ್ಟ್ರಾಜೆನೆಕಾ ಕೊವಿಡ್-19 ಲಸಿಕೆಯು ಕೊರೋನಾ ಸೋಂಕಿತರಿಗೆ ನೀಡಿದಾಗ ಶೇ.70.4% ರಷ್ಟು ಪರಿಣಾಮವನ್ನು ತೋರಿಸಿದೆ. ಈ ಲಸಿಕೆಯನ್ನು ನೀಡಿದ ನಂತ್ರ ಯಾವುದೇ ಅಡ್ಡ ಪರಿಣಾಮ, ತೊಂದರೆ ಉಂಟಾಗಿಲ್ಲ ಎಂಬುದಾಗಿಯೂ ಸಂಶೋಧಕರು ಹೇಳಿದ್ದಾರೆ.

See also  ವಾರಂತ್ಯದಲ್ಲಿ ಮೆಟ್ರೋ ಸೇವೆ ರದ್ದು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು